ಮಂಗಳೂರು: VHP ರಾಷ್ಟೀಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಬಜರಂಗಲಾಲ್ ಬಾಗಡ ರವರು ಬೆಂಗಳೂರು ನಗರದಲ್ಲಿ ನಡೆದ ಆರೆಸ್ಸೆಸ್ ಪ್ರತಿನಿಧಿ ಸಭೆಯಲ್ಲಿ ಮಾತನಾಡುತ್ತಾ, ಪ್ರಸ್ತುತ ಕರ್ನಾಟಕ ಸರ್ಕಾರವು ಹಲವು ಮಾರ್ಗಗಳಲ್ಲಿ ಮುಸ್ಲಿಮರನ್ನು ಓಲೈಸಲು ತೊಡಗಿಕೊಂಡಿದೆ. ಇದು ಹಿಂದೂಗಳ ಮೇಲಿನ ದ್ವೇಷದ ಪರಾಕಾಷ್ಠೆಯಾಗಿದೆ ಎಂದು ತಿಳಿಸಿದರು.

“ಮುಸ್ಲಿಮರಿಗೆ ನೀಡಿರುವ ಈ ಮೀಸಲಾತಿಯನ್ನು ಹಿಂದೂ ಓಬಿಸಿಗಳ ಹಕ್ಕುಗಳಿಂದ ಕಡಿತಗೊಳಿಸಲಾಗಿದೆ. ಇದು ಹಿಂದೂ ಓಬಿಸಿಗಳ ಹಕ್ಕುಗಳ ಮೇಲೆ ದಾಳಿಯನ್ನು ನಡೆಸಿ, ಕಿತ್ತು ಮುಸ್ಲಿಮರಿಗೆ ನೀಡಿದಂತಾಗಿದೆ. ಈ ಕ್ರಮವನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ” ಎಂದು ಅವರು ಹೇಳಿದರು.

“ನಾವು ಈ ಹಿಮ್ಮುಖ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇವೆ ಮತ್ತು ಇದನ್ನು ತಡೆಯಲು ಎಲ್ಲಾ ರೀತಿಯ ಕಾನೂನು ಹೋರಾಟವನ್ನು ಕೈಗೊಳ್ಳುತ್ತೇವೆ,” ಎಂದು ಅವರು ಹೇಳಿದರು.