ಮಂಗಳೂರು: ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ. ಇದೆಲ್ಲಾ ಚರ್ಚೆಯಾಗುವ ವಿಷಯವಲ್ಲ. ಸತ್ಯ ಯಾವಾಗಲೂ ದಾಖಲೆಯಲ್ಲಿ ಇರುತ್ತದೆ. ಇಲ್ಲಿವರೆಗೆ ಯಾರು ಪತ್ರದ ಮೂಲಕ ಲಿಖಿತವಾಗಿ ದೂರು ಕೊಟ್ಟಿಲ್ಲ ಎಂದರು.
ಮಸಾಜ್ ಚಯರ್ ಬಗ್ಗೆ ಮಾತನಾಡಿದ್ದರು, ಆದ್ರೆ ಅದು ಕಂಪೆನಿಯವರು ಬಂದು ಫ್ರೀ ಆಗಿ ಹಾಕಿರೋದು, ಎಲ್ಲವನ್ನೂ ಅಧ್ಯಯನ ಮಾಡಲಿ. ನನಗೆ ಎಲ್ಲರೂ ಮಾತನಾಡಿದಾಗೆ ಮಾತನಾಡಲು ಆಗಲ್ಲ. ರಾಜಕೀಯ ತುಂಬಾ ಮಾತನಾಡಬಹುದು ಎಂದರು.
ನಿಯಮ ಪ್ರಕಾರ ವಿಷಯವನ್ನು ಎತ್ತಿದ್ರೆ ಚರ್ಚೆಗೆ ಅವಕಾಶ ಕೊಡ್ತೇವೆ. ಸ್ಪೀಕರ್ ಆದ ನಂತರ ನನ್ನ ರಾಜಕೀಯ ಚಾನಲ್ ಬಂದ್ ಆಗಿದೆ. ಈಗ ಸಂವಿಧಾನ ಚಾನಲ್ ಮಾತ್ರ ಇದೆ. ಬಾಲ್ ಬಂದಾಗ ಬ್ಯಾಟ್ ನಲ್ಲಿ ಹೊಡೆಯುವ, ಸಚಿವ ಸ್ಥಾನದ ಬಗ್ಗೆ ಮಾರ್ಮಿಕವಾಗಿ ಯು ಟಿ ಖಾದರ್ ಪ್ರತಿಕ್ರಿಯಿಸಿದರು.

