ಮಂಗಳೂರು : ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊಡಿಗೆರೆ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಾಣಂತಿಯರ ಸಾವು, ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ಆದ್ರೆ ಕರ್ನಾಟಕ ಸರ್ಕಾರ ಎಲ್ಲದಕ್ಕೂ ಒಂದೇ ಉತ್ತರ ನೀಡುತ್ತಿದೆ. ಏನೇ ಆದ್ರು ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸುತ್ತಾರೆ ಎಂದರು.

ಬಾಣಂತಿಯರ ಸಾವಿನ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಟ್ವೀಟ್ ನಲ್ಲಿ ಕಿತ್ತಾಡುತ್ತಿದ್ದಾರೆ.ವಎಲ್ಲವನ್ನು ಕೇಂದ್ರಕ್ಕೆ ಬೊಟ್ಟು ಮಾಡ್ತೀರಾ ಅಂದ್ರೆ ಆಳ್ವಿಕೆಯನ್ನು ಕೇಂದ್ರಕ್ಕೆ ಬಿಟ್ಟುಕೊಡಿ. ನಿಮಗೆ ಸರ್ಕಾರ ನಡೆಸೋದಕ್ಕೆ ಸಾಧ್ಯವಿಲ್ವಾ.?. ಆಯುಷ್ಮಾನ್ ಯೋಜನೆಗೆ ಹೆಚ್ಚಿನ ಹಣ ಹೋಗ್ತಿದೆ ಅಂದ್ರೆ ಕೋರ್ಟ್ ಗೆ ಹೋಗಿ. ಸರಿಯಾದ ಅನುಪಾತದಲ್ಲಿ ಹಣ ಬರ್ತಿಲ್ಲ‌ ಅಂದ್ರೆ‌ ದೂರು ಕೊಡಿ ಎಂದರು.

ಆದ್ರೆ ಕೇಂದ್ರಕ್ಕೆ ಪತ್ರ ಬರೆಯೋದಕ್ಕೆ ನಿನ್ನೆ ಜ್ಞಾಪಕ ಬಂತಾ. ಆಯುಷ್ಮಾನ್ ಭಾರತ್ ಯೋಜನೆಯ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದಾಗ ಅವರಿಗೆ ನೆನಪಾಯ್ತಾ, ನಮ್ಮಿಂದ ಜಾಸ್ತಿ ಹಣ ಹೋಗ್ತಿದೆ ಎಂದು ಮೊದಲು ಗೊತ್ತಿರಲಿಲ್ವಾ..?, ಮೊದಲೇ ಪತ್ರ ಬರೆಯಬಹುದಿತ್ತಲ್ವಾ, ಆದ್ರೆ ನೀವು ಟ್ವೀಟ್ ವಾರ್ ನಲ್ಲಿ ಬ್ಯುಸಿಯಾಗಿದ್ದೀರಾ, ಜನರ ಸಮಸ್ಯೆಯನ್ನು ಪರಿಹರಿಸುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ ಎಂದರು.

ಸಿದ್ದರಾಮಯ್ಯ ನವರು ಡಿನ್ನರ್ ಪಾಲಿಟಿಕ್ಸ್ ನಲ್ಲಿ ತಬ್ಬಿಬ್ಬು ಆಗಿದ್ದಾರೆ. ಕರ್ನಾಟಕ ಸರ್ಕಾರ ಕಾಂಗ್ರೆಸ್ ಗೆ ಎಟಿಎಂ ಆಗಿದೆ. ದೆಹಲಿ‌ ಚುನಾವಣೆ ಹತ್ತಿರ ಬಂದಿರುವುದರಿಂದ ಇನ್ನೆಷ್ಟು ಹಣ ಡ್ರಾ ಆಗುತ್ತೆ ಎಂಬ ಭಯವಿದೆ. ಬಿಜೆಪಿ ಮೈಕ್ರೋಸ್ಕೋಪ್ ಇಟ್ಟುಕೊಂಡು ಬಜೆಟ್ ನ್ನು ಅಡಿಟ್ ಮಾಡುತ್ತೆ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊಡಿಗೆರೆ ಹೇಳಿಕೆ ನೀಡಿದ್ದಾರೆ.