ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಹೆಸರಿಡುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಅಭಿವೃದ್ಧಿ ವಿಚಾರದಲ್ಲಿ ಮಂಗಳೂರು ಆಗಬೇಕೆಂದು ಕೆಲವರ ಅಭಿಪ್ರಾಯ ಇರಬಹುದು.

ಇದರ ಬಗ್ಗೆ ಎಲ್ಲರೂ ಕುಳಿತು ಚರ್ಚೆ ನಡೆಸೋದು, ಒಗ್ಗಟ್ಟಿನ ನಿರ್ಧಾರಕ್ಕೆ ಬರೋದು ಉತ್ತಮ. ಆದರೆ ಅಭಿವೃದ್ಧಿ ಆಗುವುದಕ್ಕೆ ಹೆಸರು ಮುಖ್ಯ ಅಲ್ಲ. ಇಲ್ಲಿ ಸೌಹಾರ್ದ ಭಾವನೆ, ಸಾಮರಸ್ಯ ಬೆಳೆಸುವುದು ಮುಖ್ಯ ವಿಶ್ವಾಸಯುತ ಸಮಾಜ ಕಟ್ಟುವುದು ಮುಖ್ಯವಾಗುತ್ತದೆ. ಹೆಸರು ಬದಲಾವಣೆಯ ಮಾತ್ರಕ್ಕೆ ಏನೂ ಆಗೋದಿಲ್ಲ ಎಂದು ಸ್ಪೀಕರ್ ಯು .ಟಿ ಖಾದರ್ ಹೇಳಿದರು.