ಮಂಗಳೂರು: ಬಿಜೆಪಿಯ 18 ಶಾಸಕರ ಅಮಾನತು ವಿಚಾರವಾಗಿ ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಶಾಸಕ‌ ಹರೀಶ್ ಪುಂಜಾ ವಿವಾದಾತ್ಮಕ ಹೇಳಿಕೆ ಹಿನ್ನೆಲೆ, ಹರೀಶ್ ಪೂಂಜಾ ವಿರುದ್ದ ಹಕ್ಕುಚ್ಯುತಿಗೆ ಕಾಂಗ್ರೆಸ್ ಶಾಸಕರ ದೂರು ವಿಚಾರವಾಗಿ, ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ಶಾಸಕರಿಗೆ ಏನಾದರೂ ಮಾತನಾಡಬೇಕೆಂಬ ಚಾಲಿ ಶುರುವಾಗಿದೆ. ಮಾರ್ಕೆಟ್ ನಲ್ಲಿ ಟಿ.ಆರ್.ಪಿ ಸಿಗ್ತದೆ ಎಂದು ಮಾತನಾಡ್ತಾರೆ. ಸಂವಿಧಾನಕ್ಕೆ ಸರಿಯಾಗಿ ಮಾತನಾಡಬೇಕು,ಇರಬೇಕು. ಕೆಲವೊಮ್ಮೆ ಹೆಚ್ಚು ಕಮ್ಮಿ ಆಗುತ್ತೆ, ಆದ್ರೆ ಅದೇ ಚಾಲಿಯಾಗಬಾರದು. ಶಾಸಕ ಮಿತ್ರರು ಹಕ್ಕುಚ್ಯುತಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದರು.

ಹಕ್ಕುಚ್ಯುತಿ ಕಮಿಟಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೆ, ಸಂವಿಧಾನ ಪೀಠದ ಗೌರವ ಉಳಿಸಲು ಶಾಸಕರ ಅಮಾನತು ಮಾಡಲಾಗಿದೆ. ಆರು ತಿಂಗಳವರೆಗೆ ಅಮಾನತು ಆದೇಶ ಮಾಡಲಾಗಿದೆ. ಸಮಿತಿ ಸಭೆಯಲ್ಲೂ ಭಾಗವಹಿಸಬಾರದು ಎಂದು ಹೇಳಲಾಗಿದೆ. ಸದನ ತಗೊಂಡ ತೀರ್ಮಾನ ಆಗಿರುವ ಕಾರಣ ನನಗೊಬ್ಬನಿಗೆ ತೀರ್ಮಾನ ತೆಗೆದುಕೊಳ್ಳಲು ಆಗಲ್ಲ ಎಂದರು.

ಸರ್ಕಾರದ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ತಮ್ಮ ತಪ್ಪಿನ ಅರಿವು ಅವರಿಗೆ ಆಗಬೇಕು. ಸಂವಿಧಾನ ಪರವಾಗಿ ನಾವು ನಿಂತಿದ್ದೇವೆ. ಶಾಸಕರು ಮುಂದಿನ ದಿನ ಉತ್ತಮ ನಾಯಕರಾಗಲಿ ಎಂದು ಅವರಿಗೆ ಟಾಸ್ಕ್ ಕೊಟ್ಟಿರೋದು. ಇದು ಅವರಿಗೆ ಕೊಟ್ಟಿರುವ ಶಿಕ್ಷೆಯಲ್ಲ ಎಂದರು.