ಮಂಗಳೂರು: ನಗರದ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಅದಾನಿ ಸಿಮೆಂಟ್ ಮತ್ತು ACC ಸಿಮೆಂಟ್ ವತಿಯಿಂದ ಹಾಗೂ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಭಾಗಿತ್ವದಲ್ಲಿ ಸಿವಿಲ್ ಇಂಜಿನಿಯರಿಂಗ್ ಗುತ್ತಿಗೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಕೌಶಲ್ಯ ಅಭಿವೃದ್ಧಿ “ನೀವ್ ಅಭಿಯಾನ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 75 ಸಿವಿಲ್ ಇಂಜಿನಿಯರಿಂಗ್ ಗುತ್ತಿಗೆದಾರರು ಮತ್ತು ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀವ್ ಅಭಿಯಾನದಲ್ಲಿ ಭಾಗವಹಿಸಿದರು.
ಅದಾನಿ ಸಿಮೆಂಟ್ ಸಂಸ್ಥೆಯ ಕರ್ನಾಟಕ ವಲಯದ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಶ್ರೀ ಹಿತೇಶ್ ಪ್ರಸಾದ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ದೀಪ ಬೆಳಗಿಸುವ ಮೂಲಕ ನೀವ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ಬಿ ಎಸ್ ಪ್ರವೀಣ್ ಕುಮಾರ್ ಮತ್ತು ಅದಾನಿ ಸಿಮೆಂಟ್ ಸಂಸ್ಥೆಯ ಮಂಗಳೂರು ವಲಯದ ತಾಂತ್ರಿಕ ವಿಭಾಗದ ಉಪ ವ್ಯವಸ್ಥಾಪಕರಾದ ಶ್ರೀ ರಜತ್ ವಿ ಜಿ ಯವರು ಗೌರವ ಅತಿಥಿಗಳಾಗಿ ಭಾಗವಹಿಸಿದರು.
ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಪ್ರೊ. ಕೆ. ಶ್ರೀನಾಥ್ ರಾವ್, ಪ್ರೊ. ಶಿಲ್ಪಾ ಎಸ್, ಶ್ರೀ ಸಂಗ್ರಾಮ್ ಶ್ರೀಯಾನ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘಟನೆ “ಸೃಷ್ಟಿಕ” ಅಧ್ಯಕ್ಷರಾದ ಶ್ರೀ ವರುಣ್ ಎನ್ ಮಧ್ಯಸ್ಥ, ಉಪಾಧ್ಯಕ್ಷ ಶ್ರೀ ರಾಹುಲ್ ರಾಜೇಶ್ ರೈ, ಕಾರ್ಯದರ್ಶಿ ಶ್ರೀ ರತನ್ ರಮೇಶ್ ಪುತ್ರನ್, ಸೃಷ್ಟಿಕ ಎಂಟೆಕ್ ಪದಾಧಿಕಾರಿಗಳಾದ ಶ್ರೀ ಶ್ರೀವತ್ಸ ಎಸ್ ಭಟ್, ಶ್ರೀ ನಯನ್ ಎಸ್ ಮತ್ತು ಶ್ರೀ ಆಕಾಶ್ ಎಂ ಎಸ್ ರವರು ಉಪಸ್ಥಿತರಿದ್ದರು.
ನೀವ್ ಅಭಿಯಾನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ, ಪ್ರೊ. ಕೆ. ಶ್ರೀನಾಥ್ ರಾವ್ ರವರು “ಸಿವಿಲ್ ಇಂಜಿನಿಯರಿಂಗ್ ನಿರ್ಮಾಣ ಯೋಜನೆ ನಿರ್ವಹಣೆಯಲ್ಲಿನ ಸವಾಲುಗಳು” ವಿಷಯದ ಕುರಿತು ತಾಂತ್ರಿಕ ಉಪನ್ಯಾಸವನ್ನು ನೀಡಿದರು.
ಶ್ರೀ ಹಿತೇಶ್ ಪ್ರಸಾದ್ ರವರು “ನಾಮಿನಲ್ ಮಿಕ್ಸ್, ಸ್ಟೀಲ್ ಬಾರ್ ಬೆಂಡಿಂಗ್ ವೇಳಾಪಟ್ಟಿ ಮತ್ತು ಸುಧಾರಿತ ಕಾಂಕ್ರೀಟ್ ತಂತ್ರಜ್ಞಾನ” ವಿಷಯದ ಕುರಿತು ತಾಂತ್ರಿಕ ಉಪನ್ಯಾಸವನ್ನು ನೀಡಿದರು.
ತಾಂತ್ರಿಕ ಉಪನ್ಯಾಸಗಳ ನಂತರ, ಸಿವಿಲ್ ಇಂಜಿನಿಯರಿಂಗ್ ಗುತ್ತಿಗೆದಾರರು, ಸಿಮೆಂಟ್ ಮತ್ತು ಕಾಂಕ್ರೀಟ್‌ನ ಗುಣಮಟ್ಟ ಭರವಸೆ ಮತ್ತು ಗುಣಮಟ್ಟ ಸುಧಾರಣೆಯ ಜ್ಞಾನವನ್ನು ಉತ್ಕೃಷ್ಟಗೊಳಿಸಲು ಕಾಲೇಜಿನ ಕಾಂಕ್ರೀಟ್ ಪರೀಕ್ಷಾ ಪ್ರಯೋಗಾಲಯಕ್ಕೆ ಭೇಟಿ ನೀಡಿದರು. ಶ್ರೀ ಸಂಗ್ರಾಮ್ ರವರು ಕಾಂಕ್ರೀಟ್‌ನ ಗುಣಮಟ್ಟದ ಭರವಸೆಯನ್ನು ಖಾತ್ರಿಪಡಿಸುವ ವಿವಿಧ ಪರೀಕ್ಷೆಗಳ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಯಂತ್ರಗಳ ಹಾಗೂ ಉಪಕರಣಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ನೀವ್ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ಗುತ್ತಿಗೆದಾರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅದಾನಿ ಸಿಮೆಂಟ್ ಮತ್ತು ಎಸಿಸಿ ಸಿಮೆಂಟ್ ವತಿಯಿಂದ ಪ್ರಮಾಣಪತ್ರಗಳನ್ನು ನೀಡಲಾಯಿತು.
ಪ್ರೊ. ಕೆ. ಶ್ರೀನಾಥ್ ರಾವ್ ಸ್ವಾಗತ ಭಾಷಣವನ್ನು ಮಾಡಿದರು, ಹಾಗೂ ಕಾರ್ಯಕ್ರಮದ ಮಾಹಿತಿಯನ್ನು ಸಭೆಗೆ ನೀಡಿದರು. ಶ್ರೀ ರಜತ್ ವಿ ಜಿ ವಂದನಾರ್ಪಣೆ ಸಲ್ಲಿಸಿದರು. ಶ್ರೀ ರಾಹುಲ್ ರಾಜೇಶ್ ರೈ ಕಾರ್ಯಕ್ರಮ ನಿರ್ವಹಣೆ ಮಾಡಿದರು.

