ಮಂಗಳೂರು : ಎಸ್ಐಆರ್ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿ ದೇಶಾದ್ಯಂತ ಅರಾಜಕತೆ ಸೃಷ್ಟಿಸುವುದು, ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಕೂರುವ ಬದಲು ಕಾಂಗ್ರೆಸ್ ನಾಯಕರು, ಕರ್ನಾಟಕದಲ್ಲಿ ಎಎಸ್ಡಿಡಿ ಆಗಿರುವ (Absent, Shifted, Dead, Duplicate) 99 ಲಕ್ಷ ಮತಗಳಲ್ಲಿ ಕೇವಲ 9 ಲಕ್ಷ ಜನರನ್ನು ಕರೆತಂದು ಕ್ರಮ ಬದ್ಧವಾಗಿ ಅರ್ಜಿ ಹಾಕಿಸಲಿ ಎಂದು ಸವಾಲು ಹಾಕುತ್ತೇನೆ.
ಅದರಲ್ಲೂ ನನ್ನ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ನ್ಯಾಯಯುತವಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಮೇಲೆಯೂ ಯಾವುದೇ ಜಾತಿ ಮತ ಧರ್ಮದ ಒಬ್ಬೇ ಒಬ್ಬ ಮತದಾರನ ಹೆಸರು ಅಕ್ರಮವಾಗಿ ಡಿಲೀಟ್ ಆಗಿದ್ದರೆ ದಾಖಲೆಗಳ ಸಮೇತ ಅವರನ್ನು ಕರೆದುಕೊಂಡು ಬನ್ನಿ. ಅಂತಹ ಒಂದೂ ಪ್ರಕರಣ ಇಲ್ಲದಿದ್ದರೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಕಾಂಗ್ರೆಸ್ಸಿಗರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

