ಮಂಗಳೂರು: ನಗರದ ಪಿವಿಎಸ್ ಬಳಿ ಸರಣಿ ಅಪಘಾತ ನಡೆದಿದೆ. ಕಾರು ಚಾಲಕನ ನಿಯಂತ್ರಣ ಕಳೆದು ಕಾರು ಹಿಂದಕ್ಕೆ ಚಲಿಸಿದೆ. ಕಾರು ಮಂಗಳೂರು ಸಿಟಿ ಸೆಂಟರ್ ಕಡೆಯಿಂದ ಬರುತ್ತಿತ್ತು.

ಗೇರ್ ಹಾಕುವ ವೇಳೆ ರಿವರ್ಸ್ ಗೇರ್ ಹಾಕಿ ಕಾರು ಹಿಂದಕ್ಕೆ ಚಲಿಸಿದೆ. ಹಿಂಬದಿಯಿಂದ ಬರುತ್ತಿದ್ದ ವಾಹನಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಚಾಲಕ ಪರಾರಿಯಾಗಿದ್ದಾನೆ. ಕಾರು ಚಾಲಕ ರಾಜ್ಶೇಖರ್ ಎಂಬ ಮಾಹಿತಿ ತಿಳಿದು ಬಂದಿದೆ.