2026 ರ ಜನಗಣತಿ ಪ್ರಕ್ರಿಯೆಯಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ, ನಿಖರ ಮತ್ತು ಸಮಗ್ರ ದತ್ತಾಂಶ ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಮಾಹಿತಿ ನೀಡಿದ್ದಾರೆ.

ಸ್ವಯಂ-ಗಣತಿ ಅಭಿಯಾನವನ್ನು ಏಪ್ರಿಲ್ 1 ರಿಂದ ಏಪ್ರಿಲ್ 15, 2026 ರವರೆಗೆ ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ನಡೆಸಲಾಗುವುದು, ಇದರಿಂದಾಗಿ ನಾಗರಿಕರು ತಮ್ಮ ಮನೆಯ ವಿವರಗಳನ್ನು ಅನುಕೂಲಕರವಾಗಿ ಸಲ್ಲಿಸಲು ಸಾಧ್ಯವಾಗುತ್ತದೆ.

ಈ ಉಪಕ್ರಮವು ಪಾರದರ್ಶಕ ಆಡಳಿತ ಮತ್ತು ಭವಿಷ್ಯದ ಅಭಿವೃದ್ಧಿಗಾಗಿ ಪರಿಣಾಮಕಾರಿ ಯೋಜನೆಯತ್ತ ಒಂದು ನಿರ್ಣಾಯಕ ಹೆಜ್ಜೆಯಾಗಿದೆ.

ಸ್ವಯಂ ಗಣತಿ ಎಂದರೇನು?

ಸಾರ್ವಜನಿಕರು ತಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಬಳಸಿ ಸರ್ಕಾರದ ಅಧಿಕೃತ ವೆಬ್ ಪೋರ್ಟಲ್‌ನಲ್ಲಿ ತಮ್ಮ ಕುಟುಂಬದ ಸದಸ್ಯರ ಮಾಹಿತಿಗಳನ್ನು ತಾವಾಗಿಯೇ ಭರ್ತಿ ಮಾಡುವ ಪ್ರಕ್ರಿಯೆಯೇ ‘ಸ್ವಯಂ ಗಣತಿ’.

ವೆಬ್‌ಸೈಟ್:https://se.census.gov.in (ಗಮನಿಸಿ: ಈ ಲಿಂಕ್ ಏಪ್ರಿಲ್ 1 ರಿಂದ ಸಕ್ರಿಯವಾಗಲಿದೆ).

ಮೊಬೈಲ್ ಮೂಲಕ ಜನಗಣತಿ ಮಾಡುವುದು ಹೇಗೆ? (ಹಂತ-ಹಂತದ ಮಾಹಿತಿ)

ನೀವು ಮನೆಯಲ್ಲೇ ಕುಳಿತು ಸುಲಭವಾಗಿ ಈ ಕೆಳಗಿನ 4 ಹಂತಗಳಲ್ಲಿ ಗಣತಿ ಪ್ರಕ್ರಿಯೆ ಪೂರ್ಣಗೊಳಿಸಬಹುದು:

ಹಂತ 1: ಮೊದಲು ಅಧಿಕೃತ ಪೋರ್ಟಲ್ https://se.census.gov.in ಗೆ ಭೇಟಿ ನೀಡಿ.

ಹಂತ 2: ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ (OTP ಮೂಲಕ) ಆಗಿ.

ಹಂತ 3: ತೆರೆದುಕೊಳ್ಳುವ ಪೇಜ್‌ನಲ್ಲಿ ನಿಮ್ಮ ಕುಟುಂಬದ ಸದಸ್ಯರ ಹೆಸರು, ವಯಸ್ಸು, ಲಿಂಗ, ವಿಳಾಸ ಮತ್ತು ವಾಸಸ್ಥಳದ ನಿಖರ ವಿವರಗಳನ್ನು ಭರ್ತಿ ಮಾಡಿ.

ಮುಂದಿನ ಕ್ರಮ: ಏಪ್ರಿಲ್ 16ರಿಂದ ಗಣತಿದಾರರು ನಿಮ್ಮ ಮನೆಗೆ ಬಂದಾಗ, ನೀವು ಪಡೆದ ಈ ‘ರೆಫರೆನ್ಸ್ ಐಡಿ’ ತೋರಿಸಿದರೆ ಸಾಕು. ಅವರು ನಿಮ್ಮ ಮಾಹಿತಿಯನ್ನು ಮರುಪರಿಶೀಲಿಸಿ ಪ್ರಕ್ರಿಯೆ ಮುಕ್ತಾಯಗೊಳಿಸುತ್ತಾರೆ.

ಹಂತ 4: ಮಾಹಿತಿ ಸಬ್ಮಿಟ್ ಮಾಡಿದ Just ನಿಮ್ಮ ಮೊಬೈಲ್‌ಗೆ ಒಂದು ‘ರೆಫರೆನ್ಸ್ ಐಡಿ’ (Reference ID) ಬರುತ್ತದೆ. ಇದನ್ನು ಸುರಕ್ಷಿತವಾಗಿಟ್ಟುಕೊಳ್ಳಿ.

ಡಿಜಿಟಲ್ ಗಣತಿಯ ಪ್ರಯೋಜನಗಳು

ಸಮಯದ ಉಳಿತಾಯ: ಗಣತಿದಾರರು ಬಂದಾಗ ಗಂಟೆಗಟ್ಟಲೆ ಕುಳಿತು ಮಾಹಿತಿ ನೀಡುವ ಅವಶ್ಯಕತೆ ಇರುವುದಿಲ್ಲ.

ನಿಖರತೆ: ಡಿಜಿಟಲ್ ಮ್ಯಾಪ್ ಮತ್ತು ಪಿನ್ ಕೋಡ್‌ಗಳ ಬಳಕೆಯಿಂದಾಗಿ ನಿಮ್ಮ ವಾಸಸ್ಥಳದ ಮಾಹಿತಿ ಅತ್ಯಂತ ನಿಖರವಾಗಿ ದಾಖಲಾಗುತ್ತದೆ.

ಪಾರದರ್ಶಕತೆ: ನಿಮ್ಮ ಮಾಹಿತಿಯನ್ನು ನೀವೇ ದಾಖಲಿಸುವುದರಿಂದ ತಪ್ಪುಗಳಾಗುವ ಸಾಧ್ಯತೆ ಕಡಿಮೆ

View this post on Instagram

A post shared by News Karnataka (@newskarnataka)

.