ಪಣಂಬೂರು: ತೋಟಬೆಂಗ್ರೆ ಪ್ರದೇಶದ ಅಳಿವೆ ಬಾಗಿಲು ವ್ಯಾಪ್ತಿಯಲ್ಲಿ ಶುಕ್ರವಾರ ಮೀನು ಹಿಡಿಯಲು ಹಾಕಿದ್ದ ಬಲೆ ತೆರವಿಗೆ ಹೋದ ಸಂದರ್ಭ ನಾಪತ್ತೆಯಾಗಿರುವ ಸ್ಥಳೀಯ ಮೀನುಗಾರರಾದ ಯಶವಂತ ಕರ್ಕೇರ (52) ಮತ್ತು ಹಾಗೂ ಕಮಲಾಕ್ಷ ಸಾಲಿಯಾನ್ (47) ಅವರ ಪತ್ತೆ ಕಾರ್ಯವನ್ನು ಆಳಸಮುದ್ರದಲ್ಲಿ ಕೋಸ್ಟ್‌ಗಾರ್ಡ್ ನಡೆಸುತ್ತಿದ್ದು, ಸ್ಥಳೀಯ ವಾಗಿ ಹುಡುಕಾಟಕ್ಕೆ ರವಿವಾರ ಸ್ವತಃ ಮೀನುಗಾರರೇ ಬೋಟ್ ಮೂಲಕ ತೆರಳಿದ್ದಾರೆ.

ಅಳಿವೆ ಬಾಗಿಲು ಹಾಗೂ ಸುತ್ತಮುತ್ತ ಸಣ್ಣ ದೋಣಿ ಮುಳುಗಿರುವ ಕುರುಹು ಏನಾದರೂ ಸಿಗಬಹುದೆ ಎಂದು ಹುಡುಕಾಟ ನಡೆಸಿದರು. ಸಂಸದ ಬೃಜೇಶ್ ಚೌಟ ಅವರ ಮನವಿ ಮೇರೆಗೆ ಮೀನುಗಾರರ ಪತ್ತೆಗೆ ಕೋಸ್ಟ್ಗಾರ್ಡ್ ‘ಯತ್ನಿಸಿತಾದರೂ ರವಿವಾರ ಸಂಜೆಯವರೆಗೆ ಯಾವುದೇ ಕುರುಹು ಸಿಕ್ಕಿಲ್ಲ.