ಮಂಗಳೂರು : ಕಾವೂರು ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಘಾಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂಡಿಎಂಎ ಮಾರಾಟ ಮಾಡಲು ಯತ್ನಿಸಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಡಿ.2ರ ಮಂಗಳವಾರ ಬಂಧಿಸಲಾಗಿದೆ.

ತುಮಕೂರು ಮೂಲದ ಶಾಫಿ ಅಹ್ಮದ್, ಮೊಹಮ್ಮದ್‌ ಸಮೀರ್ ಬಂಧಿತರು. ಡಿ.2 ರಂದು ಬೆಳಿಗ್ಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಂಗ್ರ-ಕೂಳೂರು ಎಂಬಲ್ಲಿಯ ಘಾಲ್ಗುಣಿ ನದಿಯ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ದೊರೆತ ಮಾಹಿತಿಯಂತೆ ಪಣಂಬೂರಿನ ಎ.ಸಿ.ಪಿ. ಶ್ರೀಕಾಂತ್ ಕೆ.,

ಕಾವೂರಿನ ಪಿ ರಾಘವೇಂದ್ರ ಬೈಂದೂರ್, ಪಿ.ಎಸ್.ಐ. ಮಲ್ಲಿಕಾರ್ಜುನ್, ಎ.ಎಸ್.ಐ. ಚಂದ್ರಶೇಖರ್, ಸಿಬ್ಬಂದಿಗಳಾದ ರೆಜಿ ಎಂ., ಹಾಲೇಶ್ ನಾಯ್ಕ ರಿಯಾಜ್ ಎಂಬವರೊಂದಿಗೆ ದಾಳಿ ನಡೆಸಲಾಗಿದೆ.