ಮಂಗಳೂರು: ಪಂಜಿನಮೊಗರು ರಾಯಿಕಟ್ಟೆಯಿಂದ ಪ್ರಾರಂಭವಾಗಿ ಕುಂಜತ್ತಬೈಲಿನವರೆಗಿನ ನಾಲ್ಕು ಕಿಲೋಮೀಟರ್ ಉದ್ದದ ಉಪನದಿಯಿದ್ದು, ಸ್ಥಳೀಯ ಕಾರ್ಖಾನೆಗಳಿಂದ ಬಿಡುವ ಕೆಮಿಕಲ್ಸ್ ನಿಂದ ನದಿಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ಮಾಜಿ ಶಾಸಕ ಬಿ.ಎ.ಮೊಯಿದ್ದೀನ್ ಬಾವರವರು ನದಿಯ ನೀರನ್ನು ಪರಿಶೀಲಿಸಿ ಕ್ಷಣ ಮಾತ್ರದಲ್ಲಿ ಜಿಲ್ಲಾಧಿಕಾರಿಯರಿಗೆ ಪೋನಾಯಿಸಿ ಮಾಲಿನ್ಯ ತಂಡವನ್ನು ಕರೆಸಿ ಸಾರ್ವಜನಿಕರಿಗೆ ತೊಂದರೆಯಾಗುವ ಇಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಹತ್ತಿರದಲ್ಲಿಯೇ ಶಾಲೆಗಳಿದ್ದು ಮಕ್ಕಳಿಗೆ ಕೂಡಾ ತೊಂದರೆಯಾಗುವ ಎಲ್ಲ ಸಾಧ್ಯತೆಗಳಿದೆ. ಆದರೆ ಈವರೆಗೆ ಸ್ಥಳೀಯ ಶಾಸಕರಾಗಲೀ, ಮತ್ಯಾವುದೇ ರಾಜಕೀಯ ಪಕ್ಷದ ನಾಯಕನಾಗಲೀ ಭೇಟಿ ನೀಡದಿರುವುದು ಸ್ಥಳೀಯರನ್ನು ಮತ್ತಷ್ಟು ಆಕ್ರೋಶಗೊಳಿಸಿದೆ. ಪರಿಶೀಲನಾ ತಂಡದಲ್ಲಿ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಸ್ಥಳೀಯ ಮಾಜಿ ಕಾರ್ಪೋರೇಟರ್ ಮತ್ತು ಸ್ಥಳೀಯ ನಿವಾಸಿಗಳು ಹಾಜರಿದ್ದರು.