ಪುತ್ತೂರು: ದರ್ಬೆ ಡಿಜಿಟಲ್ ಸೇವಾ ಕೇಂದ್ರದಲ್ಲಿ ಗಲಾಟೆ ವಿಚಾರವಾಗಿ ಪುತ್ತೂರಿನಲ್ಲಿ ಹಿಂದೂ ಸಂಘಟನೆಗಳಿಂದ ‘ಪುತ್ತೂರು ಚಲೋ’ ನಡೆಯಿತು.
ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದವರ ಬಂಧನಕ್ಕೆ ಒತ್ತಾಯಿಸಲಾಯಿತು. ಗಲಾಟೆ ಪ್ರಕರಣದಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ದರ್ಬೆ ವೃತ್ತದಿಂದ ಮಹಾಲಿಂಗೇಶ್ವರ ದೇವರ ಗದ್ದೆವರೆಗೂ ರ್ಯಾಲಿ ನಡೆಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಸಮಾಜ ಸೇರಿದರು. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ರ್ಯಾಲಿ ಸಾಗಿತು.

