ಮಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಾಗಿದ್ದು, ಪ್ರಮಾಣವಚನ ‌ಸ್ವೀಕಾರಕ್ಕೆ ಸ್ಪೀಕರ್‌ ಯು.ಟಿ‌ ಖಾದರ್ ವಿಳಂಬ ಮಾಡುತ್ತಿರುವ ಬಗ್ಗೆ ಬಿಜೆಪಿ ಆರೋಪ‌ ವಿಚಾರವಾಗಿ ಮಂಗಳೂರಿನಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆ ಬಲಿಷ್ಟವಾಗಬೇಕಾದರೆ ವಿಶ್ವಾಸದಲ್ಲಿ ನಡೆಯಬೇಕು. ವಿಶ್ವಾಸ ಇಲ್ಲದಿದ್ದರೆ ಅದು ಸಾಧ್ಯವಿಲ್ಲ. ನಾವು ಯಾವುದೇ ತಡ ಮಾಡಿಲ್ಲ. ನಾನು ಬೆಂಗಳೂರಿನಲ್ಲಿದ್ದಾಗ ಯಾರು ನನ್ನನ್ನು ಭೇಟಿ ಆಗಿಲ್ಲ. ನಿನ್ನೆ‌ ಸಮಯ ಬೇಕೆಂದು‌ ಅರ್ಜಿ ಕೊಟ್ಟಿದ್ದಾರೆ. ಇದು ತಾಂತ್ರಿಕ ವಿಚಾರವಾದರಿಂದ ಅಭಿಪ್ರಾಯ ಪಡೆಯಬೇಕು. ಇದೊಂದು‌ ವಿಶಿಷ್ಟ ಸನ್ನಿವೇಶ ಎಂದರು.

ಸಂವಿಧಾನ ಮತ್ತು ಕಾನೂನಿನಡಿ ಅವಕಾಶ ಕೊಡಲೇಬೇಕು. ಸರ್ಕಾರದ ಕಾನೂನು ಹೋರಾಟ ನನಗೆ ಸಂಬಂಧವಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾನು ಕಾರ್ಯ ನಿರ್ವಹಿಸಬೇಕು. ಈ‌ ವಿಚಾರದಲ್ಲಿ ಆತುರ ಸಂಶಯ ಒಳ್ಳೆಯದಲ್ಲ. ಗವರ್ನರ್ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ರೀತಿಯ ತಡ ಆಗಿಲ್ಲ, ತಡೆ ಮಾಡೋದು‌ ಸಹ ಇಲ್ಲ. ಯಾವಾಗ, ಎಲ್ಲಿ, ಯಾರು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದರು.