ಮಂಗಳೂರು : ಹಿಂದೂ ಟೂರಿಸ್ಟ್ ಡ್ರೈವರ್ಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಶ್ರೀ ವಜ್ರದೇಹೀ ಮಠ, ಗುರುಪುರ ವಠಾರದಲ್ಲಿ ಭಾವಪೂರ್ಣ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ವಜ್ರದೇಹೀ ಸ್ವಾಮೀಜಿ, ನ್ಯಾಯವಾದಿ ಕಿಶೋರ್ ಕುಮಾರ್, ಮೋಹನ್ ದಾಸ್ ಮರಕಡ, ಅಭಿಷೇಕ್ ಸುವರ್ಣ ಹಾಗೂ ಗಿರೀಶ್ ಬಂಟ್ವಾಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಮಾಜಸೇವಕರೆನಿಸಿದ ಮೋಹನ್ ದಾಸ್ ಮರಕಡ ಮತ್ತು ಅಭಿಷೇಕ್ ಸುವರ್ಣ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಕೊನೆಗೆ ಶ್ರೀ ವಜ್ರದೇಹೀ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಅವರು ಹಿಂದೂ ಟೂರಿಸ್ಟ್ ಡ್ರೈವರ್ಸ್ ಸಂಘದ ಸದಸ್ಯರು ಹಿಂದೂ ಸಮಾಜದ ಹಿತಕ್ಕಾಗಿ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿ, ಅವರ ಭವಿಷ್ಯಕ್ಕೆ ಶುಭ ಹಾರೈಸಿದರು.

