ಮಂಗಳೂರು: ಕಳೆದ 25 ವರುಷದಿಂದ ಕನ್ನಡ ಜನ ಅಂತರಂಗ ಪತ್ರಿಕೆಯಿಂದ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿ ಕನ್ನಡ ಪ್ರಭಾ ಮಂಜೇಶ್ವರ,  ಉದಯವಾಣಿ ಕಾಸರಗೋಡು, ವಿಜಯ ಕರ್ನಾಟಕ ಮಂಗಳೂರು ವರದಿಗಾರರಾಗಿ ಪ್ರಸ್ತುತ  ಕೇಂದ್ರ ಸರಕಾರದ ಸುದ್ದಿವಾಹಿನಿ ಡಿಡಿ ನ್ಯೂಸ್/ ದೂರದರ್ಶನದ ಜಿಲ್ಲಾ ವರದಿಗಾರರು ಅಗಿರುವ ರಾಜೇಶ್ ಭಂಡಾರಿ ದಡ್ಡಂಗಡಿ/ ರಾಜೇಶ್ ದಡ್ಡಂಗಡಿ ಅವರಿಗೆ,  ಪತ್ರಿಕೋದ್ಯಮದಲ್ಲಿ  2025-26ರ ಸಾಲಿನ  ದ.ಕ ಜಿಲ್ಲಾ ಆಡಳಿತದ ವತಿಯಿಂದ  ಕೊಡಲ್ಪಡುವ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಲಭಿಸಿದೆ.