ಮಂಗಳೂರು: ವಿಜಯಪುರ -ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು(ನಂ.17377/17378)ರೈಲ್ವೆ ಇಲಾಖೆ ಖಾಯಂಗೊಳಿಸಿದೆ.
ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡು 2021ರ ಡಿಸೆಂಬರ್ನಲ್ಲಿ ಪುನರಾರಂಭಗೊಂಡಿತ್ತು. 2024ರಿಂದ ಮಂಗಳೂರು ಸೆಂಟ್ರಲ್-ವಿಜಯಪುರ ನಡುವೆ ಸಂಚರಿಸುತ್ತಿದೆ. ಕಳೆದ ಜೂನ್ನಲ್ಲಿ ಇದನ್ನು ಖಾಯಂಗೊಳಿಸಲಾಗಿತ್ತು.
ಮಂಗಳವಾರದಂದು ಇಲಾಖೆ ಈ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿದೆ.ವಿಜಯಪುರದಿಂದ ಸೆ.1ರಿಂದ ಹಾಗೂ ಮಂಗಳೂರು ಸೆಂಟ್ರಲ್ನಿಂದ ಸೆ.2ರಿಂದ ಈ ರೈಲು ಖಾಯಂ ರೈಲಾಗಿ ಸಂಚರಿಸಲಿದೆ.
ಈ ರೈಲು ಸಂಜೆ 4.45ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಮರುದಿನ 11.15ಕ್ಕೆ ವಿಜಯಪುರ ತಲುಪಲಿದೆ. ವಿಜಯಪುರದಿಂದ ಅಪರಾಹ್ನ 3ಕ್ಕೆ ಹೊರಟು ಮರುದಿನ ಬೆಳಗ್ಗೆ 9.50ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.

