ಪುತ್ತೂರು : ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಪುತ್ತೂರು ಶಾಸಕನಿಗೆ ಅವಹೇಳನ ವಿಚಾರವಾಗಿ ಸುಳ್ಯದಲ್ಲಿ ಶಾಸಕ‌ ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದರು.

ಇತರರನ್ನು ಏಕವಚನದಲ್ಲಿ ಮಾತನಾಡೋದು ಅವರ ಸಂಸ್ಕೃತಿಯಲ್ಲ. ಪ್ರತಿಭಟನೆಯಲ್ಲಿ ಪುತ್ತೂರಿನ ಆ ಸಂಘಟನೆಗೆ ಸೇರಿದ ಕೇವಲ ಇಬ್ಬರೇ ವ್ಯಕ್ತಿಗಳು ಇದ್ದರು. ಉಳಿದವರೆಲ್ಲಾ ಸುಳ್ಯ ಮತ್ತು ಇತರ ಕಡೆಗಳಿಗೆ ಸೇರಿದವರು. ಪ್ರತಿಭಟನೆಯಲ್ಲಿ ಯಾವನೋ ಒಬ್ಬ ಮುಟ್ಟಾಳ ಎಲ್ಲಿಂದಲೋ ಬಂದು ಮಾತನಾಡಿದ್ದಾನೆ ಎಂದರು.

ಅವನು ಸ್ವಲ್ಪ ಹೊತ್ತು ಪುತ್ತೂರಿನಲ್ಲಿರಬೇಕಿತ್ತು. ಅವನಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತಿದೆ. ನಾವು ಯಾರಿಗೂ ವಿರೋಧವಿಲ್ಲ. ಆದರೆ ಯಾರು ಅನಾವಶ್ಯಕವಾಗಿ ಇಂಥ ವಿಚಾರ ಸೃಷ್ಠಿ ಮಾಡುತ್ತಾರೋ ಅಂತವರಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತೇವೆ ಎಂದರು.

ಎಲ್ಲಾ ಕಡೆಯಿಂದಲೂ ಬುದ್ಧಿ ಕಲಿಸಲು ಗೊತ್ತಿದೆ. ಕಾನೂನು, ನ್ಯಾಯ ಮತ್ತು ಮಸಲ್ ಪವರ್ ಉಪಯೋಗಿಸಿ ಬುದ್ಧಿ ಕಲಿಸುತ್ತೇವೆ. ಯಾರನ್ನೋ ಏಕವಚನದಲ್ಲಿ ನಿಂದಿಸಿ ಯಾರೂ ದೊಡ್ಡ ಜನ ಆಗುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ವಾಗ್ದಾಳಿ ನಡೆಸಿದರು.