ಮಂಗಳೂರು: ನಿಟ್ಟೆ ಪದವಿಪೂರ್ವ ಕಾಲೇಜಿನ ಫುಟ್ಬಾಲ್ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಾರ್ಕಳ ತಾಲೂಕು ಮಟ್ಟದ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಡಾ ಎನ್. ಎಸ್ ಎ ಎಂ ಪದವಿಪೂರ್ವ ಕಾಲೇಜು ನಿಟ್ಟೆ ಹುಡುಗರ ವಿಭಾಗದಲ್ಲಿ ಪ್ರಥಮ ಹಾಗೂ ಹುಡುಗಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ನಿಟ್ಟೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆ ಗೊಂಡಿರುತ್ತದೆ.

ವಿಜೇತ ತಂಡದ ಕ್ರೀಡಾಪಟುಗಳನ್ನು ಸಂಸ್ಥೆಯ ಸಂಚಾಲಕರಾದ ವಿಶಾಲ್ ಹೆಗ್ಡೆ ಅಭಿನಂದಿಸಿದ್ದಾರೆ.