ಮಂಗಳೂರು : ಬಜಪೆಯಲ್ಲಿ ಗೋಮಾಂಸ ಒಯ್ಯುತ್ತಿದ್ದ ತಂದೆ, ಮಗಳನ್ನು ತಡೆದ ಪ್ರಕರಣ ಸಂಬಂಧಿಸಿ ಇಬ್ಬರು ಯುವಕರ ಫೋಟೊ ಹಾಕಿ ಮಿತಿಮೀರುತ್ತಿರುವ ಸಂಘಗಳ ಅಟ್ಟಹಾಸ ಎಂದು ಬರೆದು ಪ್ರಚೋದನಕಾರಿ ಸಂದೇಶ ಹಾಕಿದ ಬಗ್ಗೆ ಮಂಗಳೂರು ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ.

ಅವರನ್ನು ಏನು ಮಾಡುವುದಿಲ್ಲ ಅವರನ್ನು ಕೇಳುವವರು ಇಲ್ಲ ಹೇಳುವವರಿಲ್ಲ ಎಂಬ ಧೈರ್ಯ ಅವರಿಗಿದೆ ನಾವು ಆಡಿದ್ದೇ ಆಟ ಎಂಬಂತಾಗಿದೆ ಇನ್ನು ಗೋಮಾಂಸ ಸಂಘಪರಿವಾರದ ಭಯೋತ್ಪಾದಕರ ದಾಳಿ ಈಗೀಗ ಹೆಚ್ಚುತ್ತಲೇ ಇದೆ, ಅವರಿಗೆ ಕಾನೂನಿನ ಭಯವಿಲ್ಲ

ಬಜಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಡಿ. 27 ರಂದು ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತ ತನ್ನ ಮಗಳ ಜೊತೆಗೆ ಸ್ಕೂಟರ್ ನಲ್ಲಿ ಕೂರಿಸಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ, ಸುಮಿತ್ ಮತ್ತು ರಜತ್ ನಾಯಕ್ ಎಂಬವರು ತಡೆದು ನಿಲ್ಲಿಸಿ ಹಲ್ಲೆ ಮಾಡಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು.

ಸದ್ರಿ ಘಟನೆಗೆ ಸಂಬಂಧಿಸಿದಂತೆ ಇನ್ ಸ್ಟಾ ಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ muslim_leader ಎಂಬ ಹೆಸರಲ್ಲಿ ಪ್ರಚೋದನಕಾರಿ ಸಂದೇಶ ಹಾಕಲಾಗಿದೆ. ಇಬ್ಬರು ಯುವಕರ ಪೋಟೋವನ್ನು ಹಾಕಿ “ಮಿತಿಮೀರುತ್ತಿರುವ ಸಂಘಗಳ ಅಟ್ಟಹಾಸ ಇದಕ್ಕೆ ಕಡಿವಾಣ ಇಲ್ಲವಾಯಿತೆ? ಸಂಘ ಪರಿವಾರದ ಭಯೋತ್ಪಾದಕರ ದಾಳಿ ಈಗೀಗ ಹೆಚ್ಚುತ್ತಲೇ ಇದೆ, ಅವರಿಗೆ ಕಾನೂನಿನ ಭಯವಿಲ್ಲ.

ಕಾನೂನು ಅವರನ್ನು ಏನು ಮಾಡುವುದಿಲ್ಲ. ಅವರನ್ನು ಕೇಳುವವರು ಇಲ್ಲ ಹೇಳುವವರಿಲ್ಲ ಎಂಬ ಧೈರ್ಯ ಅವರಿಗಿದೆ. ನಾವು ಆಡಿದ್ದೇ ಆಟ ಎಂಬಂತಾಗಿದೆ. ಇನ್ನು ಗೋಮಾಂಸ ತಿನ್ನುತ್ತೇವೆ, ಸಂಘಗಳೇ ಏನು ಮಾಡುತ್ತೀರಾ.. ಥ ನಿಮ್ಮ ಜನ್ಮಕ್ಕೆ. ಹದಿಹರೆಯದ ಮಕ್ಕಳನ್ನು ಕೂಡ ನೀವು ನೋಡುವುದಿಲ್ಲ. ನಿಮ್ಮ ಮನೆಯಲ್ಲಿ ಮಕ್ಕಳು ಇಲ್ಲವೇ.. ಸರ್ಕಾರ ಆದಷ್ಟು ಬೇಗ ಈ ನಾಯಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.