ಮಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳಿಗೆ ವಿದೇಶಗಳಿಂದ ದುಡ್ಡು ಬರುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಭಯೋತ್ಪಾದಕರು ಸೇರಿದ್ದಾರೆ ಎಂಬೆಲ್ಲಾ ಆರೋಪ ಮಾಡುವಾಗ, ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆಯೇ, ಕತ್ತೆ ಕಾಯುತ್ತಿದೆಯೇ, ಗುಪ್ತಚರ ಇಲಾಖೆಗಳು ಕೇವಲ ವಿರೋಧ ಪಕ್ಷದವರನ್ನು ಹಿಮ್ಮೆಟ್ಟಿಸಲು ಮಾತ್ರವೇ ಎಂಬುದಕ್ಕೆ ಉತ್ತರಿಸಿ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಹೇಳಿದರು.

