ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು , ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕ ವಿಳಂಬ ಖಂಡಿಸಿ ಹಾಗೂ ಕೆ. ಪಿ.ಎಸ್.ಸಿ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನ ಖಂಡಿಸಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆಯನ್ನ ನಡೆಸಲಾಯಿತು.
ಸರಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಲಾಯಿತ್ತು ಬಳಿಕ ಅಧಿಕಾರಿಗೆ ವಿವಿಧ ಬೇಡಿಕೆಯನ್ನ ಅನುಷ್ಠಾನಗೊಳಿಸುವಂತೆ ಆಗ್ರಹಿಸಲಾಯಿತ್ತು. ಮುಂದುವರಿದ ಭಾಗವಾಗಿ ಸ್ಲೇಟ್ನಲ್ಲಿ ಶಿಕ್ಷಣ ಸಚಿವ ಯಾರು ಗೊತ್ತಿಲ್ಲ ಎಂದು ಬರೆಯುವ ಮೂಲಕ ಅಣುಕು ಪ್ರದರ್ಶನವನ್ನ ಮಾಡಲಾಯಿತ್ತು .ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

