ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ವಿರೋಧಿ ಮಸೂದೆಯ ವಿರುದ್ಧ ಎ.18ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯ ಪ್ರಚಾರಾರ್ಥ ಎಸ್ ವೈಎಸ್ ಕೃಷ್ಣಾಪುರ ಝೋನ್ ವತಿಯಿಂದ ಕೃಷ್ಣಾಪುರ ಜಂಕ್ಷನ್ ನಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಈ ವೇಳೆ ಅಡ್ವಕೇಟ್ ನೌಫಲ್ ಮರ್ಝೂಕಿ ವಳಾಲು‌ ಮಾತನಾಡಿ ಕೇಂದ್ರ ಸರ್ಕಾರ ಕಾರಳ ವಕ್ಪ್ ತಿದ್ದುಪಡಿ ಕಾಯ್ದೆ ಮುಸ್ಲಿಂ ವಿರೋಧಿಯಾಗಿದ್ದು, ದೇಶದಲ್ಲಿ ಒಳ್ಳವರ ಪರವಾಗಿ ಸರ್ಕಾರ ಯೋಜನೆಗಳನ್ನು ಅನುಸರಿಸುತ್ತಿದೆ. ಈ ಕರಾಳ ತಿದ್ದುಪಡಿ ಕಾಯ್ದೆ ವಿರುದ್ಧ ಎಪ್ರಿಲ್ ೧೮ ರಂದು ಬೃಹತ್ ಪ್ರತಿಭಟನೆ ನಡೆಸಲಿದ್ದು ಕೇಂದ್ರದ ಈ ತಿದ್ದುಪಡಿ ಕಾಯ್ದೆ ವಿರುದ್ಧ ಜನಾಕ್ರೋಶ ಹೊರ ಹಾಕಲಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಎಸ್ ವೈ ಎಸ್ ಕೃಷ್ಣಾಪುರ ಸರ್ಕಲ್ ಅಧ್ಯಕ್ಷ ಇರ್ಫಾನ್ ನೂರಾನಿ, ಕೃಷ್ಣಾಪುರ ಕೇಂದ್ರ ಮದರಸ ಸಮಿತಿ ಅಧ್ಯಕ್ಷ ಹಕೀಮ್ ಫಾಲ್ಕನ್, ಎಸ್ ವೈ ಎಸ್ ರಾಜ್ಯ ನಾಯಕ ಹಾಜಿ ಮುಹಮ್ಮದ್ ಆಸಿಫ್, ಜಿಲ್ಲಾ ಕಾರ್ಯದರ್ಶಿ ಹಾಜಿ ಅಬ್ದುಲ್‌ ರಹ್ಮಾನ್, ವಲಯ ಕಾರ್ಯದರ್ಶಿ ಮುಹಮ್ಮದ್ ಮನ್ಸೂರು, ಮುಹಮ್ಮದ್ ಸ್ವಾದಿಕ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.