ಮಂಗಳೂರು: ಪ್ರಿಯಾಂಕ್ ಖರ್ಗೆ ಅವರ ಯೋಗ್ಯತೆ ಇಂದ ಸಚಿವ ಆಗಿಲ್ಲ ಅವರ ಅಪ್ಪನ ಖರ್ಗೆ ಎಂಬ ಸರ್ ನೇಮಿನಿಂದ ಮಂತ್ರಿ ಸ್ಥಾನ ಲಭಿಸಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿಕೆಯನ್ನ ನೀಡಿದರು.

ಪ್ರಿಯಾಂಕ್ ಖರ್ಗೆ ಆರ್‌ ಎಸ್‌ ಎಸ್‌ ನ್ನು ಮಾನಸಿಕತೆ ಇಂದ ಮಾತನಾಡಿದನ್ನ ಖಂಡಿಸುತ್ತೆನೇ ಅಲ್ಲದೆ ಆರ್‌ ಎಸ್‌ ಎಸ್‌ನ ಬಗ್ಗೆ ತಿಳಿದುಕೊಳ್ಳುವ  ಮಾನಸಿಕತೆಯನ್ನ ಬೆಳ್ಸಿಕೊಳ್ಳಬೇಕು. ಕೇವಲ ಮುಸ್ಲಿಮರನ್ನ, ಕೇಂದ್ರದ ನಾಯಕರನ್ನ ತೃಪ್ತಿ ಪಡಿಸಲಿಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಹಾಗಾಗಿ ನಾನು ಕೂಡ ಗಣವೇಶ ಹಾಕಿ ಪಥ ಸಂಚಲನ ಮಾಡಿದ್ದೇನೆ ಮುಂದೆಯೂ ಮಾಡುತೇನೆ ತಾಕತ್ತಿದ್ರೆ ತಡೆಯಿರಿ ಎಂದು ಸವಾಲು ಹಾಕಿದರು.

ಆರ್‌ ಎಸ್‌ ಎಸ್‌ ಟೋಪಿ ಯನ್ನ ಕರಿ ಟೋಪಿ ಎಂದು ಕರೆಯುವ ಮಾನಸಿಕತನ ಇರುವ ಈ ಕಾಂಗ್ರೆಸ್ ನಾಯಕರುಗಳಿಗೆ ಎಲ್ಲಿಯಾದರೂ ಮುಸ್ಲಿಮರ ಟೋಪಿ ಬಗ್ಗೆ ಮಾತನಾಡುವ ಧೈರ್ಯ ಅಧಿಕಾರ ಇದೆಯಾ ತಾಕತ್ತಿದ್ರೆ ಅದನ್ನ ಕೇಳಿ ಎಂದು ಶಾಸಕ ವೇದವ್ಯಾಸ್ ಕಾಮತ್ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.