ಮಂಗಳೂರು: ಕರ್ನಾಟಕದಲ್ಲಿ ಗಾಳಿ ಒಂದು ಬಿಟ್ರೆ ಬೇರೆ ಎಲ್ಲದ್ದಕ್ಕೂ ಬೆಲೆ ಏರಿಕೆ. ಈ ಹಿಂದೆ ಜಿಲ್ಲೆಯಲ್ಲಿ ನಡೆದಿದ್ದ ಹಿಂದು ಒರ ಹೋರಾಟಗಾರರ ಮೇಲೆ ಕೇಸು ದಾಖಲಾಗಿತ್ತು. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಇಲ್ಲಿ ವೇದಿಕೆ ಇದ್ದಗ ನಾನು ಹೇಳಿದ್ದೆ ನಮ್ಮ ಸರ್ಕಾರ ಬಂದಾಗ ಎಲ್ಲ ಹಿಂದೂ ಪರ ಹೋರಾಟಗಾರರ ಕೇಸು ವಾಪಸು ಪಡೆಯುತ್ತೇವೆ ಎಂದಿದ್ವಿ ಎಂದು ಬಳ್ಳಾರಿ ಮಾಜಿ ಶಾಸಕ ಶ್ರೀರಾಮುಲು ಹೇಳಿಕೆ ನೀಡಿದರು.
ಆದ್ರೆ ಕೆಲಸ ನಮ್ಮಿಂದ ಮಾಡಲು ಆಗಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ನಮ್ಮ ಎಲ್ಲ ಹಿಂದೂ ಕಾರ್ಯಕರ್ತರ ಮೇಲಿನ ಕೇಸು ತೆಗೆಯುವ ಕಾರ್ಯ ಮಾಡಲಾಗುತ್ತೆ. ಉಡುಪಿ ಯಲ್ಲಿ ಶೌಚಾಲಯದಲ್ಲಿ ಮೊಬೈಲ್ ಇಟ್ರೆ ಅದು ಮಕ್ಕಳ ಆಟಿಕೆ ಅಂತಾರೆ. ಈ ಎಲ್ಲಾದರ ಬಗ್ಗೆ ಮುಂದಿನ ದಿನಗಳಲ್ಲಿ ನಾವು ಹೋರಾಟ ಮಾಡಲಿದ್ದೇವೆ ಎಂದರು.

