ಮಂಗಳೂರು : 2024-25ನೇ ಸಾಲಿನ ವಿನ್ನರ್ಸ್ ಕ್ಲಬ್ ಟೋಸ್ಟ್ ಮಾಸ್ಟರ್ಸ್ ನ ನೂತನ ಪದಾಧಿಕಾರಿಗಳ ನೂತನ ತಂಡವನ್ನು ಅಧ್ಯಕ್ಷ ಪ್ರವೀಣ್ ಪಿಂಟೋ ಅವರ ನೇತೃತ್ವದಲ್ಲಿ ಯೆಯ್ಯಾಡಿಯ ಮಧುವನ್ಸ್ ವಿಲೇಜ್ ರೆಸ್ಟೋರೆಂಟ್ ನಲ್ಲಿ ಶನಿವಾರ ನಡೆದ ಭವ್ಯ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಮಂಗಳೂರು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಗುರುಪ್ರಸಾದ್ ಭಟ್ ಮುಖ್ಯ ಅತಿಥಿಯಾಗಿದ್ದರು.

ವಿಭಾಗದ ನಿರ್ದೇಶಕಿ ಜ್ಯೋತಿಕಾ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಟೋಸ್ಟ್ ಮಾಸ್ಟರ್ಸ್ ಏರಿಯಾ ಡೈರೆಕ್ಟರ್ ಶಾರ್ಲಿನ್ ರೊಡ್ರಿಗಸ್ 2024-25ನೇ ಸಾಲಿನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರವೀಣ್ ಪಿಂಟೋ (ಅಧ್ಯಕ್ಷ), ವಾಣಿ ಉಮ್ಮಕ್ಕ (ಶಿಕ್ಷಣ), ಮಾಲಿನಿ ಹೆಬ್ಬಾರ್ (ಉಪಾಧ್ಯಕ್ಷೆ- ಸದಸ್ಯತ್ವ), ಶಿವಾನಿ ಬಾಳಿಗಾ (ಉಪಾಧ್ಯಕ್ಷೆ- ಸಾರ್ವಜನಿಕ ಸಂಪರ್ಕ), ರಾಣಿ ಮಥಿಯಾಸ್ (ಕಾರ್ಯದರ್ಶಿ), ಬೀನಾ ಶೆಟ್ಟಿ (ಕೋಶಾಧಿಕಾರಿ), ಕೆ.ಸುಬ್ರಹ್ಮಣ್ಯ ಕಾಮತ್ (ಸಾರ್ಜೆಂಟ್-ಅಟ್-ಆರ್ಮ್ಸ್), ಶೈವಿ ಸಾಲ್ಯಾನ್ (ನಿಕಟಪೂರ್ವ ಅಧ್ಯಕ್ಷ). ಜಿಲ್ಲಾ 121ನೇ ಜಿಲ್ಲಾ ನಿರ್ದೇಶಕರಾಗಿ ಆಯ್ಕೆಯಾದ ಕ್ಲಬ್ ಸದಸ್ಯೆ ಸವಿತಾ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಭಾರತಿ ಶೇವೂರು ಸ್ವಾಗತಿಸಿದರು. ಶೈವಿ ಸಾಲ್ಯಾನ್ ವಾರ್ಷಿಕ ವರದಿ ಮಂಡಿಸಿದರು. ಸುಬ್ರಹ್ಮಣ್ಯ ಕಾಮತ್ ವಂದಿಸಿದರು. ಭಾಸ್ಕರ್ ಕಿರಣ್ ಮತ್ತು ಪೂರ್ಣಿಮಾ ಮಲ್ಲಾರ್ ಸಮಾರಂಭದ ಆಯೋಜಕರಾಗಿದ್ದರು.