ಮಂಗಳೂರು : ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಈಗಾಗಲೇ ಅನೇಕ ಜನರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ಫೇಕ್ ಅಕೌಂಟ್ ಮೂಲಕ ಪ್ರಚೋದನೆ ನೀಡಲಾಗುತ್ತಿದೆ ಎಂದರು.

ಅನೇಕ ಕೊಲೆಗಳು ಆಗುತ್ತದೆ,ಎಲ್ಲಾ ಹತ್ಯೆಗಳ ಕಾರಣ ತಿಳಿದುಕೊಂಡು ಸರ್ಕಾರ ಜವಾಬ್ದಾರಿ ನಿರ್ವಹಣೆ ಮಾಡುತ್ತದೆ. ಸುಹಾಸ್ ಶೆಟ್ಟಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಹಲವಾರು ಹತ್ಯೆಗಳು ಆಗುತ್ತಾ ಇರುತ್ತದೆ. ಎಲ್ಲಾ ಹತ್ಯೆ ಗಳಿಗೆ ಸರ್ಕಾರ ಮನೆಗೆ ಹೋಗಬೇಕಂತಿಲ್ಲ ಎಂದರು.

ದಿನೇಶ್ ಗುಂಡೂರಾವ್ ವಿರುದ್ಧ ಶಾಸಕ ಹರೀಶ್ ಪೂಂಜಾ ವೈಯುಕ್ತಿಕ ಟೀಕೆ ಹಿನ್ನಲೆ ಸಂಸ್ಕೃತಿ ಇರುವ ವ್ಯಕ್ತಿ ಆ ತರಹದ ಹೇಳಿಕೆ ನೀಡೋದಿಲ್ಲ. ವೈಯಕ್ತಿಕ ಟೀಕೆಗಳಿಗೆ ಉತ್ತರ ಕೊಡಲ್ಲ. ಕೀಳು ಅಭಿರುಚಿ ಯ ಹೇಳಿಕೆಗೆ ಪ್ರತ್ಯುತ್ತರ ಇಲ್ಲ. ಅವರ ನಡವಳಿಕೆ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದರು.

ಹರೀಶ್ ಪೂಂಜಾ ಧರ್ಮದ ಬಗ್ಗೆ ಅನೆಕ ಮಾತನಾಡುತ್ತಾರೆ. ಅವರಿಗೆ ನಾಗರಿಕತೆ ಇಲ್ಲದೇ ಇದ್ದರೆ ಏನು ಮಾಡೋದು. ಬಜ್ಪೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ, ಗೃಹ ಇಲಾಖೆಯ ವಿಷಯಗಖ ಬಗ್ಗೆ ಮಾತಾನಾಡೋದಿಲ್ಲ. ಸುಹಾಸ್ ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದೆ.

ಎಲ್ಲಾ ಕೆಲಸಗಳನ್ನು ಪೊಲೀಸರು ಮಾಡುತ್ತಿದ್ದಾರೆ. ಎನ್ ಐ ಎ ಗೆ ಕೊಡಬೇಕಾ ಬೇಡ್ವಾ ಅನ್ನೋದನ್ನು ಯೋಚನೆ ಮಾಡುತ್ತೇವೆ. ಪೊಲೀಸರು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂಲ ತಿಳಿದುಕೊಳ್ಳೋಕೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅನೇಕ ಪ್ರಕರಣ ವನ್ನು ಸಿಬಿಐ ಗೆ ಕೊಟ್ರೂ ತನಿಖೆ ಅಷ್ಟೇನೂ ಪ್ರಗತಿಯಾಗಿಲ್ಲ. ನಮ್ಮ ಉದ್ದೇಶ ನಿಷ್ಪಕ್ಷಪಾತ ವಾಗಿ ತನಿಖೆ ಮಾಡೋದಾಗಿದೆ ಎಂದರು.

ಪೊಲೀಸರೂ ಎಲ್ಲಾ ಆ್ಯಂಗಲ್ ಗಳಲ್ಲಿ ತನಿಖೆ ಮಾಡಿದ್ದಾರೆ. ಹತ್ಯೆ ಹಿಂದೆ ಸಂಘಟನೆಗಳು ಇರುವ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ. ಅವರ ಊಹಾಪೋಹಕ್ಕೆ ಉತ್ತರ ಕೊಡೋಕೆ ಆಗಲ್ಲ. ಪೊಲೀಸರು ಆರೋಪಗಳಿಗೆ ದಿಟ್ಟಕ್ರಮ ಕೈಗೊಂಡಿದ್ದಾರೆ. ಕಪೋಕಲ್ಪಿತ ವಿಚಾರಕ್ಕೆ ಉತ್ತರ ಕೊಡೋಕೆ ಆಗಲ್ಲ. ಅವರಿಗೆ ಸ್ಪಷ್ಟ ಮಾಹಿತಿ ಇದ್ರೆ ಕೊಡಬೇಕು. ಆ ಮಾಹಿತಿಯ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರಿನಲ್ಲಿ ದಕ‌ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದರು.