ಮಂಗಳೂರು: ಕೋಮು ಹತ್ಯೆ ವರದಿ ನೀಡಲು ಕೆಪಿಸಿಸಿ ನಿಯೋಗ ಭೇಟಿ ವಿಚಾರವಾಗಿ ಮಂಗಳೂರಿನಲ್ಲಿ ನಿಯೋಗದ ಸದಸ್ಯ ಜಯಪ್ರಕಾಶ್ ಹೆಗ್ಡೆ ಹೇಳಿಕೆ ನೀಡಿದ್ದಾರೆ. ಜನಪ್ರತಿನಿಧಿಗಳು ಅಭಿವೃದ್ಧಿ ಚರ್ಚೆ ಮಾಡಬೇಕು, ಅದು ಬಿಟ್ಟು ಗೊಂದಲ ಮೂಡಿಸ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು ಇಲ್ಲಿಗೆ ಬರಲು ಹೆದರ್ತಿದ್ದಾರೆ, ಬಂಡವಾಳ ಹೂಡಿಕೆಗೂ ಹೆದರ್ತಿದ್ದಾರೆ. ಜನಪ್ರತಿನಿಧಿಗಳು ಎಲ್ಲರಿಗೂ ಸಮವಾಗಿ ಕೆಲಸ ಮಾಡಬೇಕು. ತಪ್ಪನ್ನು ತಪ್ಪು ಅಂತ ಹೇಳಬೇಕು, ಅದು ಬಿಟ್ಟು ವೈಭವೀಕರಿಸಬಾರದು. ಮಂಗಳೂರು ಏಳು ಗಂಟೆ ಹೊತ್ತಿಗೆ ಬಂದ್ ಆದ್ರೆ ಯಾರು ಬರ್ತಾರೆ. ಜನಪ್ರತಿನಿಧಿಗಳು ಸಮಸ್ಯೆ ಇದ್ದರೆ ವಿಧಾನಸೌಧದಲ್ಲಿ ಚರ್ಚೆ ಮಾಡಿ. ಅದು ಬಿಟ್ಟು ಹೊರಗೆ ಚರ್ಚೆ ಮಾಡಿದ್ರೆ ಸಮಸ್ಯೆ ಆಗುತ್ತೆ ಎಂದರು.

