ಬಂಟ್ವಾಳ : ಪಾಣೆಮಂಗಳೂರು ಶ್ರೀ ಶಾರದಾ ಪೂಜಾ ಮಹೋತ್ಸವದ ಶತಮಾನೋತ್ಸವ ಆಚರಣೆಯ ಅಂಗವಾಗಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಮಂಗಳವಾರ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು.

ಅ (1)

ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಜಿ.ಹರೀಶ್ ಅವರು ಪಾಣೆಮಂಗಳೂರು ಅಂಚೆ ಕಛೇರಿಯಲ್ಲಿ ಅಂಚೆ ಲಕೋಟೆಯನ್ನು‌ ಬಿಡುಗಡೆಗೊಳಿಸಿದರು. ಬಳಿಕ ಪಾಣೆಮಂಗಳೂರು ಶ್ರೀ ವಿಠಲಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವರೆಗೆ ಮೆರವಣಿಗೆ ಮೂಲಕ ಬಂದು ಬಿಡುಗಡೆಗೊಂಡ ವಿಶೇಷ ಅಂಚೆ ಲಕೋಟೆಯನ್ನು ಶಾರದಾ ಪೂಜಾ ಮಹೋತ್ಸವ ಸಮಿತಿಯ‌ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಬ (3)

ಈ ಸಂದರ್ಭ ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮೂನಿಷ್ ಅಲಿ ಹಾಗೂ ಸದಸ್ಯರಾದ ಇದ್ರೀಸ್ ,ಪುತ್ತೂರು ಸಹಾಯಕ ಅಂಚೆ ಅಧೀಕ್ಷಕರಾದ ಚಂದ್ರ ನಾಯ್ಕ , ಕಾರ್ಕಳ ಸಹಾಯಕ ಅಂಚೆ ಅಧೀಕ್ಷಕರಾದ ಮೋಹನ್ , ಪಾಣೆಮಂಗಳೂರು ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಯೋಗೀಶ್ ಪೈ,

ಅಧ್ಯಕ್ಷರಾದ ಪ್ರಮೋದ್ ಭಟ್, ಕಾರ್ಯದರ್ಶಿ ಗಣೇಶ್ ನಾಯಕ್, ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಪ್ರಹ್ಲಾದ್ ನಾಯಕ್ ಎನ್, ಪಾಣೆಮಂಗಳೂರು ಉಪ ಅಂಚೆಪಾಲಕರಾದ ಗೀತಾ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರು ಅಂಚೆ ವಿಭಾಗದ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು.