ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಲೆಟ್ಟಿಯಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ದುರ್ಮರಣವನ್ನಪ್ಪಿದ ಕಂದಮ್ಮ ಚಿರನ್ವಿಯ ಮನೆಗೆ ಭೇಟಿ ನೀಡಿ ಪದ್ಮರಾಜ್ ಆರ್. ಪೂಜಾರಿ ಸಾಂತ್ವನ ಹೇಳಿದರು.
ಆಕೆಯ ನಿವಾಸಕ್ಕೆ ಭೇಟಿ ನೀಡಿ, ದುಃಖತಪ್ತರಾದ ಹೆತ್ತವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಇದೇ ವೇಳೆ ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಘಾತದ ಸಂದರ್ಭ ತಕ್ಷಣವೇ ಕಾರ್ಯಪ್ರವೃತ್ತರಾಗಿ ಅನೇಕ ಮಕ್ಕಳನ್ನು ರಕ್ಷಿಸಿದ ಸ್ಥಳೀಯರಾದ ಉದಯ್, ಕೇಶವ ಹಾಗೂ ಶಕುಂತಲಾ ಅವರ ಸಮಯಾನುವರ್ತಿ ಸಾಹಸ ಕಾರ್ಯ ವನ್ನು ಶ್ಲಾಘಿಸಿದರು.

