ಮಂಗಳೂರು: ಅಕ್ರಮ ಗೋಹತ್ಯೆ ಕಾರಣಕ್ಕೆ ದ್ವೇಷ ಹುಟ್ಟುವುದನ್ನು ನಾವು ನೋಡಬೇಕಾಗಿದೆ. ಇಡೀ ರಾಜ್ಯದಲ್ಲಿ ಅಧಿಕೃತ ಕಸಾಯಿಖಾನೆ ಇರುವುದು ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ. ಆದರೆ ಅಕ್ರಮವಾಗಿ ಈ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಸಾಯಿಖಾನೆಗಳಿದ್ದು ಅದಕ್ಕಾಗಿ ಗೋವುಗಳ ಕಳ್ಳತನ, ಅದರ ನೆಪದಲ್ಲಿ ಗಲಾಟೆಗಳು ಆಗಿದ್ದಿದೆ. ಮಂಗಳೂರಿನಲ್ಲಿ ಅಧಿಕೃತ ಕಸಾಯಿಖಾನೆ ನಿಂತು ಎರಡು ವರ್ಷ ಆದರೂ ಎಲ್ಲ ಕಡೆಯೂ ಬೀಫ್ ಮಾರಾಟ ಕೇಂದ್ರಗಳಿವೆ ಅಲ್ಲಿಗೆ ಗೋಮಾಂಸ ಹೇಗೆ ಬರುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು.
ಆಡಳಿತ ನಡೆಸುವವರು ನಮ್ಮದು ಮಾತ್ರ ಸರಿ, ಬೇರೆಯವರದ್ದು ಸರಿ ಇಲ್ಲ ಎಂದು ಹೇಳುವುದನ್ನು ಒಪ್ಪಲಾಗದು. ಎಲ್ಲ ರೀತಿಯ ಕೊಲೆಗಳಿಗೆ, ಅಪರಾಧಗಳಿಗೆ ಡ್ರಗ್ಸ್ ಕಾರಣ ಎಂದಾದರೆ, ಇಷ್ಟೊಂದು ಡ್ರಗ್ಸ್, ಗಾಂಜಾ ಆಗ್ತಿದೆ ಎಂದರೆ ಯಾಕೆ ಇದನ್ನು ಕಂಟ್ರೋಲ್ ಮಾಡಕ್ಕಾಗಲ್ಲ.
ಇದನ್ನು ನಿರ್ದಾಕ್ಷಿಣ್ಯವಾಗಿ ತಡೆಯುವ ಕೆಲಸ ಆಗಬೇಕು ಇನ್ನು ಎರಡು ವರ್ಷಗಳಿಂದ ಸಿಆರ್ ಜೆಡ್ ಮರಳು ತೆಗೆಯಲು ಅವಕಾಶ ಇಲ್ಲ. ಆದರೆ ಅಕ್ರಮವಾಗಿ ತೆಗೆಯುವವರು ತೆಗೆದು ಮಾರಾಟ ಮಾಡುತ್ತಾರೆ. ಇದರಿಂದ ಎರಡು ವರ್ಷದಲ್ಲಿ ಎಷ್ಟು ನಷ್ಟ ಆಗಿರಲಿಕ್ಕಿಲ್ಲ ಎಂದು ಶಾಸಕ ಕಾಮತ್ ಕೇಳಿದರು

