ಮಂಗಳೂರು: ಆರ್‌ ಸಿಬಿ ವಿಜಯೋತ್ಸವ ಹಿನ್ನೆಲೆ ಬೆಂಗಳೂರಿನಲ್ಲಿ ಕಾಲ್ತುಲಿತ ಸಾವು ನೋವು ವಿಚಾರ ಮಂಗಳೂರಿನಲ್ಲಿ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ ಸಿಬಿ ರಾಜ್ಯದ ತಂಡ ಅಥವಾ ರಾಷ್ಟ್ರದ ತಂಡ ಅಲ್ಲ. ಇದನ್ನು ನಡೆಸುವವರು ಸಾವಿರಾರು ಕೋಟಿ ಮಾಲೀಕರು. ನಿನ್ನೆ ಘಟನೆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಸಿಎಂ ಇದಕ್ಕೆ ಪ್ರತಿಕ್ರಿಯೆ ಕೊಡ್ತಾರೆ ಎಂದರು.

ಈಗಾಗಲೇ ಸಾವು ನೋವಾದ ಕುಟುಂಬಗಳಿಗೆ ಇವ್ರು ಒಂದು ಕೋಟಿ ಪರಿಹಾರ ನೀಡಬೇಕು. ಸಾವಿರಾರು‌ ಕೋಟಿ ಮಾಲಿಕರಿದ್ದಾರೆ ಒಂದು ಕೋಟಿಯಂತೆ ನೀಡಲಿ. ಮಂಗಳೂರು ನಮ್ಮೂರು ಅದಕ್ಕೆ ಬಂದಿದ್ದೇನೆ, ಯಾವಾಗಲು ಬರುವ ಹಾಗೆ ಬಂದಿದ್ದೇನೆ, ಕೆಲವೊಂದು ನಡೀ ಬಾರದ ಘಟನೆ ನಡೆದಿದೆ ಯಾರು ಧೃತಿ ಗೆಡಬಾರದು, ಅದರ ಬಗ್ಗೆ ಮಾತುಕತೆಗಾಗಿ ಬಂದಿದ್ದೇನೆ ಎಂದರು.

ಸಿ. ಎಂ. ಭೇಟಿ ಸಂದರ್ಭದಲ್ಲಿ ಮಂಗಳೂರು ಮಣಿಪುರ ಮಾಡ್ಬೇಡಿ ಅಂತ ಹೇಳಿದ್ದೇನೆ, ಇಡೀ ರಾಜ್ಯದಲ್ಲಿ ಶಾಂತಿ ನೆಲಿಸಿರುವಾಗ ಕೇವಲ ಕರಾವಳಿ ದಕ್ಷಿಣ ಕನ್ನಡ ಯಾಕಿಷ್ಟು ಅನಾಹುತ ನಡೆಯುತ್ತಿದೆ ಕೂಲಾಂಕುಶ ವಾಗಿ ನೋಡ್ಬೇಕಗ್ತದೆ. ಒಬ್ಬ ಅಮಾಯಕ ಹೋಗಿ ಸಾಯಿಸೋಕೆ ಇದು ಮಣಿಪುರ ಅಲ್ಲ, ಉತ್ತರ ಪ್ರದೇಶ ಸಹ ಅಲ್ಲ, ಇದರ ಬಗ್ಗೆ ಕ್ರಮ ತೆಗೊಳೋಕ್ಕೆ ಮುಖ್ಯ ಮಂತ್ರಿಯವರಲ್ಲಿ ಮಾತಾಡಿದಾಗ. ಮುಖ್ಯ ಮಂತ್ರಿ ಯವರು ಹೇಳಿದ್ರು ಸರಿಮಾಡುವ ಹಾಗೆ ತಾವು ಕೂಡ ದ. ದ. ಜಿಲ್ಲೆಯ ಕ್ಯಾಂಗ್ರೆಸ್ ಕಾರ್ಯಕರ್ತರಿ ಗೆ ಮಾತಾಡಿ ಹೇಳಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯ ಕರ್ತರು ದೃತಿ ಗೆಡುವ ಅಗತ್ಯ ಇಲ್ಲಾ.

ನಾವು ನ್ಯಾಯ ಪರ ಇದ್ದೇವೆ, ಯಾವುದೇ ಧರ್ಮ ಜಾತಿ ಭಾಷೆ ಅನ್ನೋದಿಲ್ಲ, ಸಂವಿಧಾನ ಹಾಗೂ ನ್ಯಾಯದ ಪರ ಇರುವವರು ಎಲ್ಲರಿಗೂ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಅದರಿಂದ ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡಲು ಸಹ ಬಂದಿದ್ದೇನೆ, ಯಾರು ದುಡುಕಿ ಮುಂದೆ ಹೆಜ್ಜೆ ಇಟ್ಟು ರಾಜೀನಾಮೆ ಕೊಡೋದು ಬೇಕಾಗಿಲ್ಲ, ಯಾರು ಸಹ ಉಗ್ರವಾಗಿ ಯೋಚನೆ ಮಾಡೋದು ಬೇಕಾಗಿಲ್ಲ, ರಾಜ್ಯ ದಲ್ಲಿ ಒಳ್ಳೆ ಹೆಸರಿದೆ ಅದನ್ನು ಮನಿಪುರ ಆಗಲು ಬಿಡೂದಿಲ್ಲ,

ನಾನು ಪಕ್ಷದಲ್ಲಿ ಹಲವಾರು ವರ್ಷ ದಿಂದ ಇದ್ದೇನೆ, ಎಲ್ಲರಲ್ಲೂ ಮಾತಾಡ್ತೇನೆ, ಯಾರನ್ನು ಕಳ್ಳೊಳ್ಳಿಕ್ಕೆ ತಯಾರಿಲ್ಲ, ಯಾವುದೊ ಬಾವನತ್ಮಕ ವಾಗಿ ವಿಚಾರದಲ್ಲಿ ನೋವಾದಾಗ ರಾಜೀನಾಮೆ ಕೊಟ್ಟಿದ್ದಾರೆ, ವಾಪಾಸ್ ತೆಗೆದುಕೊಳ್ಳಲು ಮನವಿ ಮಾಡ್ತೇನೆ,

ಜಿಲ್ಲೆಯ ಕೊಲೆಗಳ ವಿಚಾರವಾಗಿ ಪ್ರತಿಕ್ರಿಯಿಸಿ, ಇದರಲ್ಲಿ ಪಾತ್ರದರಿಗಳಿದ್ದರೆ ನೋಡಿ ಅವರು ಅವರ ಕುಟುಂಬದವರು ಪಾಪದವರು, ಸೂತ್ರದರಿಗಳು ಕೈಯಿಂದ ತಪ್ಪಿಸಿಗೊಳ್ತಾ ಇದ್ದಾರೆ, ಸೂತ್ರದರಿಗಳ ಕೈ ಗೊಂಬೆಗಳಾಗಿ ಪಾತ್ರದಾರಿಗಳು ಪ್ರಾಣ ಕಳ್ಕೊಳ್ತಾ ಇದ್ದಾರೆ ಕೊಲೆಯಾಗ್ತಿದ್ದರೆ, ಜೈಲ್ ಗೂ ಹೋಗ್ತಾ ಇದ್ದಾರೆ, ಸ್ವಲ್ಪ ದಿನದಲ್ಲಿ ಸೂತ್ರದರಿಗಳು ಯಾರೆಂದು ನಾವು ಹೇಳ್ತೆವೆ, ಅಲ್ಲಿಯ ತನಕ ಪೊಲೀಸ್ ಅಧಿಕಾರಿಗಳು ಒಳ್ಳೆಯವರಿದ್ದರೆ ಕೇಮ ಜರಗಿಸುತ್ತಾರೆ ಎಂದರು.