ಮಂಗಳೂರು: ಎರಡು ವಾರಗಳಿಂದ ಮೈದುಂಬಿ ಹರಿಯುತ್ತಿದ್ದ ನೆತ್ರಾವತಿ  ನದಿ,  ಜುಲೈ 20, 2024 – ಕಳೆದ ಕೆಲ ದಿನಗಳಿಂದ  ನದಿಯ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ನದಿ ಪ್ರಸ್ತುತ 7.4 ಮೀಟರ್ ನಲ್ಲಿ ಹರಿಯುತ್ತಿದೆ.

‌ಇನ್ನು ಈ ಬಗ್ಗೆ  ಹವಾಮಾನ ಇಲಾಖೆಯ ವರದಿ ಪ್ರಕಾರ, ಮುಂಗಾರು ಮಳೆಗಾಲದ ಕೊನೆಯಲ್ಲಿ ಇದೇ ರೀತಿ ನೀರಿನ ಮಟ್ಟ ಇಳಿಯುವುದು ಸಾಮಾನ್ಯವಾಗಿದೆ. ಜನತೆ ಜಾಗೃತರಾಗಿರಲು ಹಾಗೂ ನೀರಿನ ಬಳಕೆಯಲ್ಲಿ ಎಚ್ಚರಿಕೆಯಿಂದಿರಲು ಸಲಹೆ ನೀಡಲಾಗಿದೆ. ನೀರು ಇಳಿಮುಖವಾದರೆ ಮುಂದೆ ಈ ಬಾರಿಯಂತೆ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆಯನ್ನು ಎದುರಿಬೇಕಾಗಬಹುದು ಹಾಗಾಗಿ ನೀರಿನ ಬಳಕೆಯಲ್ಲಿ ಎಚ್ಚರಿಕೆಯಿಂದಿರಲು ಸಲಹೆ ನೀಡಿದೆ.