ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಂಗಮ ಕ್ಷೇತ್ರ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಾಲ್ಕು ವರ್ಷದ ಬಳಿಕ ನೇತ್ರಾವತಿ-ಕುಮಾರಾಧಾರ ನದಿ ಸಂಗಮವಾಗಿದೆ.
ಸಹಸ್ರಲಿಂಗೇಶ್ವರ ದೇವಳ ಮುಂಭಾಗದ ಧ್ವಜಸ್ತಂಭದ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಬಾಗಿನ ಅರ್ಪಿಸಿದರು. ಪೂಜೆಯಲ್ಲಿ ಭಾಗಿಯಾದ ಮಾಜಿ ಶಾಸಕ ಸಂಜೀವ ಮಠಂದೂರು, ಎಸಿ ಜುಬಿನ್ ಮೊಹಪತ್ರ, ತಹಶೀಲ್ದಾರ್ ಪುರಂದರ ಹೆಗ್ಡೆ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗಿಯಾಗಿದ್ದರು. ಈ ವೇಳೆ ಹಲವಾರು ಮಂದಿ ಭಾಗವಹಿಸಿದ್ದರು.

