ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಬ್ಬರ ಮಳೆ ಜೋರಾಗಿದೆ. ಕುಮಾರಧಾರ-ನೇತ್ರಾವತಿ ನದಿ ಮೈದುಂಬಿ ಹರಿಯುತ್ತಿದೆ. ಜೀವನದಿಗಳ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ.
Screenshot 2024 07 30 155852

ದ.ಕ. ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಂಗಮ ಕ್ಷೇತ್ರ ಸಹಸ್ರಲಿಂಗೇಶ್ವರ ದೇವಸ್ಥಾನ. ಈಗಾಗಲೇ ಕುಮಾರಧಾರ-ನೇತ್ರಾವತಿಯ ನೀರು ಅಂಗಣಕ್ಕೆ ಪ್ರವೇಶಿಸಿದೆ.
ಅಪಾಯದ ಮಟ್ಟ ದಾಟಿ ನದಿ ನೀರು ಬಂದಿದೆ. ಎರಡು ನದಿಗಳ ಸಂಗಮದ ವೀಕ್ಷಣೆಗಾಗಿ ಭಕ್ತಸಾಗರ ಹರಿದು ಬಂದಿದೆ.

Screenshot 2024 07 30 155905

ಸಹಸ್ರಲಿಂಗೇಶ್ವರನ ಬಳಿ ಎರಡು ನದಿಗಳ ನೀರು ಸಂಗಮಕ್ಕೆ ಭಕ್ತಗಣ ಕಾದುಕುಳಿತಿದೆ. ಅಪಾಯದ ಮಟ್ಟ ಮೀರಿ ನದಿ ನೀರು ದೇವಸ್ಥಾನದ ಅಂಗಣ ಪ್ರವೇಶವಾಗಿದೆ.

Screenshot 2024 07 30 155821

ಇನ್ನು ಸ್ಥಳದಲ್ಲೇ ಎನ್ ಡಿ ಆರ್ ಎಫ್, ಹೋಂಗಾರ್ಡ್ಸ್, ಅಗ್ನಿಶಾಮಕ‌ದಳದ ಸಿಬ್ಬಂದಿಗಳು ಮೊಕ್ಕ ಹೂಡಿದ್ದಾರೆ. ದೇವಸ್ಥಾನದ ಒಳಗೆ ಇರುವ ಕಡತಗಳನ್ನ ಸಿಬ್ಬಂದಿಗಳು ಹೊರತಂದಿದ್ದಾರೆ. ನದಿ ನೀರು ಒಳಪ್ರವೇಶಿಸಿದ್ದಲ್ಲಿ ದೇವಳದ ದಾಖಲೆಗಳ ಕಡತಕ್ಕೆ ನೀರು ಬರುವ ಸಾಧ್ಯತೆಯಿದೆ. ಈ ಹಿನ್ನೆಲೆ ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನ ಸೇಫ್ ಆಗಿ ಸಿಬ್ಬಂದಿಗಳು ಹೊರತಂದಿದ್ದಾರೆ.