ಮಂಗಳೂರು: ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯದಿಂದ ಕೋಮಾ ಸ್ಥಿತಿಯಲ್ಲಿ ಮಗಳು ಜೀವನ್ಮರಣ ಹೋರಾಟ ಮಾಡುತ್ತಿರುವ ಘಟನೆ ನಡೆದಿದೆ.

ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಇಸ್ಲಾಮಿಕ್ ಮತ್ತು ಪಿಯು-ಸಿಎ ಶಿಕ್ಷಣಕ್ಕಾಗಿ ಸೇರ್ಪಡೆಯಾಗಿದ್ದ ಮಂಗಳೂರು ಮೂಲದ ವಿದ್ಯಾರ್ಥಿನಿ ಯುಮ್ನ. ಜೂನ್ ತಿಂಗಳ ಕೊನೆಯಲ್ಲಿ ಕಾಲೇಜಿಗೆ ಸೇರಿದ್ದಳು.
ಸಂಸ್ಥೆಯ ಹಾಸ್ಟೆಲ್ ಸೇರ್ಪಡೆಯಾದ ನಾಲ್ಕೇ ದಿವಸದಲ್ಲಿ ಭೇದಿ ಶುರುವಾಗಿದೆ.

ಆನಂತರ, ಫುಡ್ ಸರಿಯಾಗುತ್ತಿಲ್ಲ, ಇಲ್ಲಿ ಎಲ್ಲ ಮಕ್ಕಳಿಗೂ ಟೈಫಾಯ್ಡ್ ಇದೆಯೆಂದು ಪೋಷಕರ ಬಳಿ ಯುಮ್ನ ಹೇಳಿದ್ದಳು. ಆನಂತರ, ಜ್ವರಕ್ಕೆಂದು ಅಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಔಷಧಿ ಪಡೆದಿದ್ದಳು. ಮಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲಾಗಿಲ್ಲ ಎಂದು ಯುಮ್ನ ತಂದೆ ಅಶ್ಪಾಕ್ ಆರೋಪಿಸಿದ್ದಾರೆ.

ರೆಸ್ಟ್ ಬೇಕೆಂದು ಹೇಳಿದರೂ, ಹಾಸ್ಟೆಲಿನಲ್ಲಿ ಒತ್ತಡ ಹೇರಿ ಮಗಳನ್ನು ಕಾಲೇಜಿಗೆ ಕಳಿಸುತ್ತಿದ್ದರು ಎಂದು ಅಶ್ಪಾಕ್ ಆರೋಪಿಸಿದ್ದಾರೆ. ಬೀದರ್ ಗೆ ತೆರಳಿ ಆಗಸ್ಟ್ 18ರಂದು ಯುಮ್ನ ಳನ್ನು ಮಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಟೈಫಾಯ್ಡ್ ನಿಂದ ಯುಮ್ನ ಬಳಲುತಿದ್ದಳು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುಮ್ನ ಳಿಗೆ ಚಿಕಿತ್ಸೆ ನಡೆಯುತ್ತಿದೆ.

ಕೋಮಾ ಸ್ಥಿತಿಯಲ್ಲಿ ಯುಮ್ನ ಚಿಕಿತ್ಸೆ ಪಡೆಯುತ್ತಿದ್ದಾಳೆ. ಶಾಹೀನ್ ವಿದ್ಯಾಸಂಸ್ಥೆಯ ಅವ್ಯವಸ್ಥೆ ಬಗ್ಗೆ ದೂರು ನೀಡಿದರೂ ಸಚಿವ ಯು ಟಿ ಖಾದರ್ ಸ್ಪಂದಿಸಿಲ್ಲ. ಸಚಿವ ಖಾದರ್ ಗೆ ತಿಳಿಸಿದ್ರೂ ಹೆತ್ತವರ ಅಳಲಿಗೆ ಸ್ಪಂದಿಸಿಲ್ಲ ಎಂದಿದ್ದಾರೆ. ಶಾಹೀನ್ ಸಂಸ್ಥೆಯ ಹಾಸ್ಟೆಲ್ ನವರ ನಿರ್ಲಕ್ಷ್ಯದಿಂದ ನನ್ನ ಮಗಳಿಗೆ ಈ ಸ್ಥಿತಿಯಾಗಿದೆ ಎಂದು ಯುಮ್ಮ ಳ ತಂದೆ ಅಶ್ಫಾಕ್ ಆರೋಪಿಸಿದ್ದಾರೆ.

ಇದರ ಬಗ್ಗೆ ಆರೋಗ್ಯ ಇಲಾಖೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುಮ್ನ ಳ ತಂದೆ ಅಶ್ಫಾಕ್ ಒತ್ತಾಯಿಸಿದ್ದಾರೆ. ಈ ವರೆಗೆ ಯುಮ್ನಾಳ ಚಿಕಿತ್ಸೆಗೆ 35 ಲಕ್ಷ ರೂಪಾಯಿ ಪೋಷಕರು ಖರ್ಚು ಮಾಡಿದ್ದಾರೆ.