ಮಂಗಳೂರು: ಸ್ವಾಮಿ ವಿವೇಕಾನಂದರ 163ನೇ ಜನ್ಮ ಜಯಂತಿಯ ಅಂಗವಾಗಿ ನಡೆಯುವ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವು ಸೋಮವಾರ, 12 ಜನವರಿ 2026 ರಂದು “Ignite the Mind, Illuminate the Nation” ಎಂಬ ಆಶಯದೊಂದಿಗೆ ನಡೆಯಲಿದೆ.

ಈ ಕಾರ್ಯಕ್ರಮವನ್ನು ಮಂಗಳೂರು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದು, ಯುವಕರಲ್ಲಿ ವ್ಯಕ್ತಿತ್ವ ನಿರ್ಮಾಣ, ನಾಯಕತ್ವ ಗುಣಗಳು ಹಾಗೂ ರಾಷ್ಟ್ರಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶ ಹೊಂದಿದೆ.

ಸ್ವಾಮಿ ಜ್ಞಾನೀಶಾನಂದಜಿ, ಸಹ ಸಂಪಾದಕರು, ಪ್ರಬುದ್ಧ ಭಾರತ ಮಾಸಪತ್ರಿಕೆ, ಅದ್ವೈತ ಆಶ್ರಮ, ಮಾಯಾವತಿ, ಉತ್ತರಾಖಂಡ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸ್ವಾಮಿ ಜಿತಕಾಮಾನಂದಜಿ, ಕಾರ್ಯದರ್ಶಿ, ರಾಮಕೃಷ್ಣ ಮಿಷನ್, ಮಂಗಳೂರು ಅವರು ಮುಖ್ಯ ಭಾಷಣ ನೀಡಲಿದ್ದಾರೆ. ಕಾರ್ಯಕ್ರಮವನ್ನು ಶ್ರೀ ಪಿ. ಪ್ರದೀಪ್ ಕುಮಾರ್, ಅಧ್ಯಕ್ಷರು, ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಮಂಗಳೂರು ಅವರು ಉದ್ಘಾಟಿಸಲಿದ್ದು,

ಶ್ರೀ ಎಂ. ರಂಗನಾಥ ಭಟ್, ಗೌರವ ಕಾರ್ಯದರ್ಶಿ, ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಮಂಗಳೂರು ಅವರು ಮುಖ್ಯ ಅತಿಥಿಯಾಗಿರುತ್ತಾರೆ. ಶ್ರೀ ಹರೀಶ ಶೆಟ್ಟಿ, ಪ್ರಾಂಶುಪಾಲರು, ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್, ಮಂಗಳೂರು ಅವರು ವಿಶೇಷ ಆಹ್ವಾನಿತರಾಗಿದ್ದು, ಸ್ವಾಗತ ಭಾಷಣವನ್ನು ಕ್ಯಾಪ್ಟನ್ ಗಣೇಶ್ ಕಾರ್ನಿಕ್, ನಿವೃತ್ತ ಭಾರತೀಯ ಸೇನಾಧಿಕಾರಿ ಅವರು ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸ್ವಾಮಿ ಜ್ಞಾನೀಶಾನಂದಜಿ ಅವರು “Energy, Efficiency, Excellence – The Youth Formula” ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಪ್ರಸಿದ್ಧ ಲೇಖಕ ಹಾಗೂ ವಾಗ್ಮಿ ಶ್ರೀ ಚಕ್ರವರ್ತಿ ಸೂಲಿಬೆಲೆ (ಬೆಂಗಳೂರು) ಅವರು “ಸ್ವಾಮಿ ವಿವೇಕಾನಂದರ ಜೀವನ: 21ನೇ ಶತಮಾನದ ಯುವಕರಿಗೆ ದಾರಿದೀಪ” ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.

ಈ ಸಂದರ್ಭದಲ್ಲಿ “From Learning to Leadership – The Vivekananda Way” ವಿಷಯದ ಮೇಲೆ ಪ್ಯಾನಲ್ ಚರ್ಚೆ ನಡೆಯಲಿದ್ದು, ಶ್ರೀ ಚಕ್ರವರ್ತಿ ಸೂಲಿಬೆಲೆ, ಡಾ. ಅರುಣಾ ಯಡಿಯಾಳ್, ಪ್ರಾಧ್ಯಾಪಕರು, ಫಾದರ್ ಮ್ಯುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಮಂಗಳೂರು ಹಾಗೂ ಶ್ರೀ ಪ್ರಜ್ವಲ್ ಆಚಾರ್ಯ, ಜಂಟಿ ವ್ಯವಸ್ಥಾಪಕ ನಿರ್ದೇಶಕರು, SKF Elixer India Pvt. Ltd., ಮೂಡಬಿದ್ರೆ ಅವರು ಪ್ಯಾನಲಿಸ್ಟ್ಗಳಾಗಿ ಭಾಗವಹಿಸಲಿದ್ದಾರೆ. ಈ ಚರ್ಚೆಯನ್ನು ಶ್ರೀ ರಂಜನ್ ಬೆಳ್ಳರ್ಪಾಡಿ ಅವರು ನಿರ್ವಹಿಸಲಿದ್ದಾರೆ.

13 ಜನವರಿ 2026 ಮಂಗಳವಾರದಂದು ಮಂಗಳ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ “ಶಕ್ತಿ” – ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು “Awaken the Shakthi Within – Empower, Enlighten, Elevate” ಎಂಬ ಆಶಯದೊಂದಿಗೆ ಆಯೋಜಿಸಲಾಗಿದೆ.

ಸ್ವಾಮಿ ಜ್ಞಾನೀಶಾನಂದಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸ್ವಾಮಿ ಜಿತಕಾಮಾನಂದಜಿ ಅವರು ಮುಖ್ಯ ಭಾಷಣ ನೀಡಲಿದ್ದಾರೆ. ಕಾರ್ಯಕ್ರಮವನ್ನು ಕು ಆತ್ಮಿಕಾ ಅಮಿನ್, ನಿರ್ದೇಶಕರು, ಜೆ ವಿ ಗ್ರೂಪ್ ಆಫ್ ಕಂಪನೀಸ್, ಮಂಗಳೂರು ಅವರು ಉದ್ಘಾಟಿಸಲಿದ್ದು, ಡಾ. ಅನಿತಾ ಜಿ. ಭಟ್, ಉಪಾಧ್ಯಕ್ಷರು, ಮಂಗಳ ಶಿಕ್ಷಣ ಸಂಸ್ಥೆಗಳು, ಮಂಗಳೂರು ಅವರು ಮುಖ್ಯ ಅತಿಥಿಯಾಗಿರುತ್ತಾರೆ. ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕು ಧನಲಕ್ಷ್ಮಿ ಪೂಜಾರಿ ಅವರು ವಿಶೇಷ ಆಹ್ವಾನಿತರಾಗಿದ್ದು, ಸ್ವಾಗತ ಭಾಷಣವನ್ನು ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಅವರು ನೀಡಲಿದ್ದಾರೆ.

ಸ್ವಾಮಿ ಜ್ಞಾನೀಶಾನಂದಜಿ ಅವರು “Education that Empowers – The Vivekananda Vision for Women” ವಿಷಯದ ಕುರಿತು ಹಾಗೂ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಸಂಚಾಲಕರು, ಸಕ್ಷಮ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದ್ರೆ ಅವರು “Leading with Shakthi: Redefining Women’s Leadership in the 21st Century” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

“The Power to Care: Redefining Strength and Service in Today’s Women” ವಿಷಯದ ಪ್ಯಾನಲ್ ಚರ್ಚೆಯಲ್ಲಿ ಶ್ರೀಮತಿ ದಿವ್ಯಾ ರೈ, ಸ್ಥಾಪಕಿ ಮತ್ತು CEO, Rai’s Spices, ಮಂಗಳೂರು, ಶ್ರೀಮತಿ ಅನುಪಮಾ ವಿ. ಪ್ರಭು, ಕ್ಲಿನಿಕಲ್ ಸೈಕಾಲಜಿಸ್ಟ್, ಅನಿರ್ವೇಧ ಫೌಂಡೇಶನ್, ಮಂಗಳೂರು ಹಾಗೂ ಶ್ರೀಮತಿ ಪ್ರಿಸಿಲ್ಲಾ ರೋಡ್ರಿಗೆಸ್, ಪ್ರಶಸ್ತಿ ಪಡೆದ ನರ್ಸ್, ಫಾದರ್ ಮ್ಯುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಮಂಗಳೂರು ಅವರು ಭಾಗವಹಿಸಲಿದ್ದು, ಚರ್ಚೆಯನ್ನು ಡಾ. ವಿಜಯ ಸರಸ್ವತಿ ಬಿ., ಸ್ನಾತಕೋತ್ತರ ಅಧ್ಯಯನಗಳ ಡೀನ್, ವಿವೇಕಾನಂದ ಕಾಲೇಜು, ಪುತ್ತೂರು ಅವರು ನಿರ್ವಹಿಸಲಿದ್ದಾರೆ.

16 ಜನವರಿ 2026 ಶುಕ್ರವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮಂಗಳೂರು ಸಹಯೋಗದಲ್ಲಿ“Engineering the Future with Character and Compassion” ಎಂಬ ಆಶಯದೊಂದಿಗೆ “ಸ್ಫೂರ್ತಿ” – ಯುವ ಸಬಲೀಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸ್ವಾಮಿ ಜ್ಞಾನೀಶಾನಂದಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸ್ವಾಮಿ ಜಿತಕಾಮಾನಂದಜಿ ಅವರು ಮುಖ್ಯ ಭಾಷಣ ನೀಡಲಿದ್ದಾರೆ. ಕಾರ್ಯಕ್ರಮವನ್ನು ಶ್ರೀ ಬಿ. ಪ್ರಶಾಂತ್ ಬಾಳಿಗ, ಮುಖ್ಯ ಮಹಾಪ್ರಬಂಧಕರು (ಆಡಳಿತ), MRPL–ONGC, ಮಂಗಳೂರು ಅವರು ಉದ್ಘಾಟಿಸಲಿದ್ದಾರೆ.

ಶ್ರೀ ಶಶಿಧರ ಡೋಂಗ್ರೆ, ಗ್ಲೋಬಲ್ ಹೆಡ್, Embedded Engineering and Verification & Validation, L&T Technology Services, ಮೈಸೂರು ಅವರು ಮುಖ್ಯ ಅತಿಥಿಯಾಗಿದ್ದು, ಡಾ. ಎಂ. ಎಂ. ನಾಯಕ್, Former Director, Launch Vehicle Programme Office, ISRO, and Former Professor, IISc ¨ ಬೆಂಗಳೂರು ಮತ್ತು ಶ್ರೀ ಅಬ್ದುಲ್ ರಹೀಮಾನ್, ನಿರ್ದೇಶಕರು, ಕನಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಂಗಳೂರು ಅವರು ವಿಶೇಷ ಆಹ್ವಾನಿತರಾಗಿದ್ದಾರೆ. ಸ್ವಾಗತ ಭಾಷಣವನ್ನು ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಅವರು ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸ್ವಾಮಿ ಜ್ಞಾನೀಶಾನಂದಜಿ ಅವರು “The Power of Self-Belief – Dare to Dream, Dare to Do” ವಿಷಯದ ಮೇಲೆ ಹಾಗೂ ಪ್ರೊ. ನವಕಾಂತ್ ಭಟ್, Dean, Division of Interdisciplinary Sciences and Professor, Centre for Nano Science and Engineering, Indian Institute of Science, , ಬೆಂಗಳೂರು ಅವರು “Nanotechnology for Healthcare, Sensors and Artificial Intelligence” ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.

“From Code to Character: The Inner Engineering of Success” ವಿಷಯದ ಪ್ಯಾನಲ್ ಚರ್ಚೆಯಲ್ಲಿ ಪ್ರೊ. ನವಕಾಂತ್ ಭಟ್, ಶ್ರೀ ಶಶಿಧರ ಡೋಂಗ್ರೆ ಮತ್ತು ಶ್ರೀಮತಿ ವಿನತಾ ಕೆ., ನಿವೃತ್ತ ಸಹ ಪ್ರಾಧ್ಯಾಪಕಿ (ಮನೋವಿಜ್ಞಾನ) ಹಾಗೂ TEDx ವಕ್ತಾರೆ, ಸೇಂಟ್ ಆಗ್ನೆಸ್ ಕಾಲೇಜು, ಮಂಗಳೂರು ಅವರು ಭಾಗವಹಿಸಲಿದ್ದು, ಚರ್ಚೆಯನ್ನು ಶ್ರೀ ವೈಶಾಖ್ ಕೆ.ಪಿ., ನಿರ್ದೇಶಕರು ಮತ್ತು ಸಹ ಸ್ಥಾಪಕರು, Infinui Knowledge Hub ಅವರು ನಿರ್ವಹಿಸಲಿದ್ದಾರೆ.

ಈ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತರು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಪ್ರತಿನಿಧಿಗಳಿಗೆ ಉಪಹಾರ, ಭೋಜನ ಹಾಗೂ ಭಾಗವಹಿಸಿದ ಪ್ರಮಾಣಪತ್ರಗಳನ್ನು ಒದಗಿಸಲಾಗುವುದು. ಕಾರ್ಯಕ್ರಮದ ದಿನಗಳಲ್ಲಿ ರಾಮಕೃಷ್ಣ–ವಿವೇಕಾನಂದ ಸಾಹಿತ್ಯಕ್ಕೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ.