ಮಂಗಳೂರು: ಕೂಳೂರು ಬ್ರಿಡ್ಜ್ ನಲ್ಲಿ ಕಾರು ನಿಲ್ಲಿಸಿ ಇದೀಗ ಮುಮ್ತಾಜ್ ಅಲಿ ನಾಪತ್ತೆ ಆಗಿರುವ ಘಟನೆ ನಡೆದಿದೆ. ಮಾಜಿ ಶಾಸಕರಾದ ಮೊಯ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ಅವರು ತಮ್ಮ BMW XY ಕಾರು ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಮುಮ್ತಾಜ್ ಅಲಿ ಅವರು ಮನೆಯಿಂದ ಹೊರಟಾಗ ತಾನು ಸಾಯುತ್ತೇನೆ ಅಂತಾ ಹೇಳಿ ಹೋಗಿದ್ದಾರೆಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇನ್ನು ಪೋಲಿಸರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಸ್ಥಳದಲ್ಲಿ ಜನರ ಜಮಾವಣೆ ಗೊಂಡಿದ್ದಾರೆ.

