ಮಂಗಳೂರು: ಕಾಂಗ್ರೆಸ್ ವಿರುದ್ದ ಸಂಸದ ಬ್ರಿಜೇಶ್ ಚೌಟ ವಾಗ್ದಾಳಿ ನಡೆಸಿದ್ದಾರೆ. ಅವರು ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮತನಾಡಿ, ಸಂಸದ್ ಅಧಿವೇಶನ ದ ಸಂದರ್ಭ ಕಾಂಗ್ರೆಸ್ ತನ್ನ ಹಳೇ ಚಾಳಿ ಮುಂದುವರೆಸಿದೆ. ಜನಸಾಮಾನ್ಯರಿಂದ ತಿರಸ್ಕೃತ ಗೊಂಡವರಿಂದ ಬೇರೇನೂ ನಿರೀಕ್ಷೆ ಮಾಡುವಂತಿಲ್ಲ. ಗಾಂಧಿ ಪರಿವಾರದ ನೇತೃತ್ವದಲ್ಲಿ ಕಾಂಗ್ರೆಸ್ ವ್ಯವಸ್ಥಿತ ವಾಗಿ ಸದನದ ಕಾರ್ಯಕಲಾಪ ಹಾಳು ಮಾಡಿದೆ ಎಂದರು.

ಸಂವಿಧಾನದ ಬಗ್ಗೆ , ಸದನದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಗೌರವವಿಲ್ಲ. ಕಾಂಗ್ರೆಸ್ ಅರಾಜಕತೆ ಸೃಷ್ಢಿಸಲು ಹೊರಟಿದೆ. ರಾಜ್ಯದಲ್ಲಿ ಸಿ ಟಿ‌ ರವಿ ಅವರ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ನಡೆದು ಕೊಂಡ ರೀತಿ‌ ಖಂಡನೀಯ. ರಾಜ್ಯದಲ್ಲಿ ನಡೆದಿರುವುದು ಪ್ರಜಾಪ್ರಭುತ್ವ ಕ್ಕೆ ಪೂರಾಕವಾದ ವಿಷಯ ಅಲ್ಲ . ಅಲ್ಲಿ ಸಂಸತ್ ನಲ್ಲಿ ಕಲಾಪ ಆಗಲು ಬಿಡಲಿಲ್ಲ ಎಂದರು.

ಇಲ್ಲಿ ಕರ್ನಾಟಕದಲ್ಲಿ ಗೂಂಡಾ ಗಳನ್ನು ತಂದು ವಿಧಾನಸೌದಕ್ಕೆ ನುಗ್ಗಿಸಿದ್ದಾರೆ. ಇದ್ದನ್ನ ಯಾರು ಒಪ್ಪುವಂತಹ ವಿಚಾರ ಅಲ್ಲ. ಮಾಜಿ ಸಚಿವರ ಮೇಲೆ ಶಾಸಕರ ಮೇಲೆ ವಿಧಾನ‌ಪರಿಷತ್ ನಲ್ಲಿ ಹಲ್ಲೆಗೆ ಮುಂದಾಗುತ್ತಿದ್ದಾರೆ ಅಂದರೆ ಏನು?. ವಿಧಾನ ಪರಿಷತ್ ನಲ್ಲಿ‌ ಕಾನೂನು‌ ಕೈಗೆ ತೆಗೆದು ಕೊಳ್ಳುತ್ತಾರೆ ಅಂದರೇನು ?. ರಾಜ್ಯದಲ್ಲಿ ಯಾವರೀತಿಯ ಪರಿಸ್ಥಿತಿ ಇದೆ ಅನ್ನೋದು ಇದು ಸೂಚಿಸುತ್ತಿದೆ ಎಂದರು.

ಈ ಹಿಂದೆ ಸಿದ್ದರಾಮಯ್ಯ ಸರಕಾರ ಇದ್ದಾಗ ಇದೇ ರೀತಿಯ ಪರಿಸ್ಥಿತಿ ಇತ್ತು. ಗೂಂಡಾಗಳಿಗೆ ಜಿಹಾದಿ ಗಳಿಗೆ ಈ ರೀತಿಯ ಮಾನಸಿಕತೆಯ ವ್ಯಕ್ತಿಗಳಿಗೆ ಪ್ರೊತ್ಸಾಹ ದೊರೆಯುತ್ತಿದೆ. ಈ ಹಿಂದೇಯೂ ನಡೆದಿತ್ತು ಈಗಲೂ ಅದೇ ರೀತಿ‌ ನಡೆಯುತ್ತಿದೆ ಆದರೆ ಪ್ಯಾಟರ್ನ್ ಬೇರೆ ಅಷ್ಟೆ. ಅದು ಸಿದ್ದರಾಮಯ್ಯ 1.0 ಇದು ಸಿದ್ದರಾಮಯ್ಯ 2.0 ಎಂದರು.