ಮಂಗಳೂರು: ದನಗಳನ್ನು ಅಕ್ರಮವಾಗಿ ಮತ್ತು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುವ ತಮ್ಮ ಹೀನ ಚಾಳಿಯನ್ನು ದುರುಳರು ಮುಂದುವರಿಸಿದ್ದಾರೆ. ಎರಡು ವಾರಗಳಲ್ಲಿ ಐದನೇ ಬಾರಿಗೆ ಅಕ್ರಮ ಸಾಗಾಟ ಪ್ರಕರಣ ಪತ್ತೆಯಾಗಿರುವ ಘಟನೆ ಸೂರಲ್ಪಾಡಿ ಎಂಬಲ್ಲಿ ನಡೆದಿದೆ.

ಇಪ್ಪತ್ತಮೂರಕ್ಕು ಅಧಿಕ ದನಗಳನ್ನು ಒಂದು ಕಾಲಿನಲ್ಲಿ ಟೆಂಪೋ ಮೇಲ್ಭಾಗಕ್ಕೆ ಕಟ್ಟಿ ನೇತಾಡಿಸಿ, ಕೊರಳು ಮುರಿಯುವ ರೀತಿಯಲ್ಲಿ ಇನ್ನೊಂದು ಹಗ್ಗದಿಂದ ಕಟ್ಟಿ ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಭಜರಂಗ ದಳದ ಕಾರ್ಯಕರ್ತರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ.


