ಮಂಗಳೂರು : ಎಡೆ ಬಿಡದೇ ಸುರಿಯುತ್ತಿದ್ದ ಜಡಿ ಮಳೆಗೆ ಪ್ರವಾಹ ಪರಿಸ್ಥಿತಿ ಎದುರಿಸಿದ ಕ್ಷೇತ್ರದ ಹಲವೆಡೆ ಧಾವಿಸಿದ ಮಂಗಳೂರು ದಕ್ಷಿಣ ಶಾಸಕ, ಅವರು ಮನೆಯಲ್ಲಿ ಬೆಚ್ಚಗೆ ಕೂತು ಅಧಿಕಾರಿಗಳಿಗೆ ಫೋನ್ ಮಾಡಿ ಅಲ್ಲಿ ಹೋಗಿ, ಅಲ್ಲಿ ಹೋಗಿ ಅಂತ ಸೂಚನೆ ನೀಡದೆ ಸ್ವತಃ ಶಾಸಕರೇ ಪ್ರವಾಹ ಉಂಟಾಗಿರುವ ಸ್ಥಳದಲ್ಲಿ ಇದ್ದಾರೆ ಅಂತ ಅಧಿಕಾರಿಗಳೇ ಓಡೋಡಿ ಬಂದಿದ್ದಾರೆ. ಕರಾವಳಿಯದಂತ್ಯ ಮೂರು ದಿನದಿಂದ ಮಳೆ ಆಗುತಿದ್ದು ಮಂಗಳೂರಿನ ಕೆಲವು ಭಾಗ ನೆರೆಯಿಂದ ಕೂಡಿದೆ.