ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಶಾಸಕ ಭರತ್ ಶೆಟ್ಟಿ ವಾಗ್ದಾಳಿ ನಡೆಸಿದರು. ಮಂಗಳೂರಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವನ್ನ ಪ್ರಶ್ನೆ ಮಾಡಿದ್ರೆ ಕೇಸ್ ಹಾಕುವ ಸ್ವಭಾವ ರೂಡಿಸಿಕೊಂಡಿದೆ. ಎಂ ಎಲ್ ಎ ಗಳಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೂ ಕೇಸ್ ಹಾಕುವ ಕೆಲಸ ಆಗುತ್ತಿದೆ. ಇದರಿಂದ ನಮ್ಮ ಧ್ವನಿ ಹತ್ತಿಕ್ಕಳು ಸಾಧ್ಯವಿಲ್ಲ ಎಂದರು.

ಎರಡು ವರ್ಷದ ಸಾಧನೆ ಬಗ್ಗೆ ಅನೇಕ ಪ್ರಶ್ನೆ ಇದೆ. ಎರಡು ವರ್ಷದಲ್ಲಿ ಸ್ವಲ್ಪವಾದರೂ ಜನರ ಜೀವನ ಶೈಲಿ ಬದಲಾಗಿದೆಯಾ?. ಹಾಲು, ನೀರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಬಡವರ ಜೇಬಿಗೆ ಕತ್ತರಿ ಹಾಕಿದ್ದಕ್ಕೆ ಈ ಸಂಭ್ರಮವೋ?, ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಕ್ಲಿನ್ ಚಿಟ್ ಪಡೆದ ಕಾರಣಕ್ಕೆ ಸಂಭ್ರಮ?. ಗುತ್ತಿಗೆದಾರರ ಸಾವಿಗೆ ಸಂಭ್ರಮ ಪಡಲು ಸಂಭ್ರಮಾಚರಣೆ?. ಬಾಣಂತಿಯರ ಸಾವಿಗೆ ಸಂಭ್ರಮಾಚಾರಣೆ ಮಾಡುತ್ತಿದ್ದಾರಾ?.

1600ಕ್ಕೆ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಅದಕ್ಕೆ ಸಂಭ್ರಮವೊ?. ಕೆಪಿಎಸ್ಸಿ ಪರೀಕ್ಷೆಯಲ್ಲಿ ಎಡವಟ್ಟು ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನ ಹಾಳು ಮಾಡಿದಕ್ಕೆ ಸಂಭ್ರಮವೊ?. ಹುಬ್ಬಳ್ಳಿ ನೇಹಾ ಕೊಲೆಯಿಂದ ಹಿಡಿದು ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆಯವರೆಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯುದ್ಧ ಬೇಡ ಎಂದು ಪಾಕಿಸ್ತಾನ ಮಾಧ್ಯಮದಲ್ಲಿ ಹೆಸರು ಬಂದಿದ್ದಕ್ಕೆ ಸಂಭ್ರಮವೋ?. ರಾಜ್ಯ ಸರಕಾರ ಬಂದ ಬಳಿಕ 2023-24ರ ಅವಧಿಯಲ್ಲಿ ಕ್ರೈಮ್ ರೇಟ್ ಜಾಸ್ತಿಯಾಗಿದೆ.

ಸರಕಾರಿ ಕಚೇರಿಯಲ್ಲಿ ದುಡ್ಡು ಕೊಡದೆ ಯಾವುದೇ ಕೆಲಸ ಆಗೋದಿಲ್ಲ. ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳು ಮಾಜಿ ನಾಯಕರು ಪೊಲೀಸ್ ಇಲಾಖೆ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಒಂದೆ ಒಂದು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಒಂದೆ ಒಂದು ರೂಪಾಯಿ ಹಣ ಇಲ್ಲ. ಮುಸಲ್ಮಾನರ ಕಾರ್ಯಕ್ರಮಕ್ಕೆ ಕೊಡುತ್ತಾರೆ ನಮಗೂ ಕೊಡಿ ಎಂದರು.