ಮಂಗಳೂರು: ಕಾರಿನಲ್ಲಿ ಹೋಗುವಾಗ ರಸ್ತೆ ಹೊಂಡಗಳನ್ನು ಕಂಡು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಗರಂ ಆಗಿದ್ದು, ಹೊಂಡ ಮುಚ್ಚದ ಪುತ್ತೂರು ನಗರಸಭೆ ಕಮಿಷನರ್ ಗೆ  ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ‌ಮುಚ್ಚದ ಹಿನ್ನಲೆ ಫೋನ್ ಮೂಲಕ ತರಾಟೆ ಮಾಡಿದ್ದಾರೆ. ರೋಡ್ ಪ್ಯಾಚ್ ವರ್ಕ್ ಮಾಡಿ ಎಂದು ಎಷ್ಟು ಸಲ ಹೇಳಬೇಕು. ನಾನು ಹೇಳೋ ಭಾಷೆ ನಿಮಗೆ ಅರ್ಥವಾಗುತ್ತೋ ಇಲ್ಲವೇ?, ಎಲ್ಲದಕ್ಕೂ ಇಂಜಿನಿಯರ್ ಅಂತಾ ಹೇಳಿದ್ರೆ, ನೀವು  ಯಾಕೆ ಕಮಿಷನರ್ ಆಗಿ ಇರುವುದು. ಯಾವನ್ ಅವನು ಇಂಜಿನಿಯರ್ ತಲೆ ಕೆಟ್ಟಿದ್ಯಾ ಅವನಿಗೆ? ಎಂದರು.

ನಾಳೆ ಕೆಲಸ ಆಗದಿದ್ರೆ ಮತ್ತೆ ಏನು ಮಾಡುತ್ತೇನೆ ನೋಡಿ, ಈ ರಸ್ತೆಯಲ್ಲಿ ಹೋಗುವ ಜನ ಇಲ್ಲಿ ಸಾಯುತ್ತಿದ್ದಾರೆ. ನಾನು ಅದೇ ರಸ್ತೆಯಲ್ಲಿ ಹೋಗುತ್ತಿದ್ದೇನೆ ಎಲ್ಲಿ ಕೆಲಸ ನಡೆಯುತ್ತಿದೆ. ನೀವು ಒಬ್ಬ ಕಮಿಷನರಾ? ಎಲ್ಲದ್ದಕ್ಕು ಕೆಳ ಹಂತದ ಅಧಿಕಾರಗಳತ್ತ ಕೈ ತೋರಿಸುತ್ತಿರಾ, ಡೋಂಟ್ ಟೇಕ್ ಇಟ್ ಲೈಟ್ಲಿ, ಮುಂದಿನ ಮಳೆಗಾಲದವರೆಗೂ ಹೀಗೆ ಕಾಲ ಕಳೆಯುತ್ತಿರಾ? ಎಂದು ಫುಲ್ ವಾರ್ನಿಂಗ್ ಮಾಡಿದರು.