ಮಂಗಳೂರು: ಸ್ಟಿಂಗ್ ಆಪರೇಷನ್ ಬಗ್ಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸ್ಟಿಂಗ್ ವಿವಾದ ವಿಚಾರವಾಗಿ ಮಂಗಳೂರಿನಲ್ಲೂ ಸಿಎಂ ಡಿ.ಕೆ ಶಿವಕುಮಾರ್ ಮೌನವಹಿಸಿದ್ದಾರೆ. ತನಗೆ ಸ್ಟಿಂಗ್ ವಿಚಾರವೇ ಗೊತ್ತಿಲ್ಲ ನನಗೆ ಮಾಹಿತಿ ಇಲ್ಲ ಎಂದು ಸಿಎಂ ಹೇಳಿದರು.

ಸ್ಟಿಂಗ್ ವಿಚಾರದ ವಿವಾದಲ್ಲಿ ಸಿಎಂ ರಕ್ಷಣೆಗೆ ಸಚಿವ ಯು ಟಿ ಖಾದರ್ ಬಂದರು. ಸಿಎಂ ಗೆ ಕೇಳಿದ ಪ್ರಶ್ನೆಗೆ ಸಚಿವ ಯುಟಿ ಖಾದರ್ ಉತ್ತರಿಸಿದ್ದಾರೆ. ಸ್ಟಿಂಗ್ ವಿವಾದ ಕುರಿತು ತನಿಖೆ ನಡೆಯುತ್ತಿದೆ. ತನಿಖೆ ಸರಿಯಾಗಿ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲವೂ ಹೊರಬರಲಿದೆ. ತನಿಖೆ ಆಗುತ್ತಿದೆ, ತನಿಖೆಯ ಬಳಿಕ ಉತ್ತರ ಸಿಗಲಿದೆ ಎಂದರು.

ಅವರೇ ತನಿಖೆಯಾಗಲಿ ಅಂತಾ ಹೇಳಿದ್ದಾರೆ. ತನಿಖೆಯ ಆದ್ಮೇಲೆ ಯಾರು ಏನು ಅಂತಾ ಗೊತ್ತಾಗುತ್ತದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಖಾರವಾಗಿ ಸಚಿವ ಯುಟಿ ಖಾದರ್ ಉತ್ತರಿಸಿದ್ದಾರೆ.