ಮಂಗಳೂರು: ಮಂಗಳೂರಿನಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯಮ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿ ನಡೆಸಿದರು. ನರೇಂದ್ರ ಮೋದಿ ಪ್ರಧಾನಿಯಾಗಿ ಯಶಸ್ವಿ 11ವರ್ಷ ಪೂರೈಸಿದ್ದಾರೆ. ಕೇಂದ್ರ ಸರ್ಕಾರ ದೇಶದಲ್ಲಿ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಯು.ಪಿ.ಎ ಸರ್ಕಾರದಿಂದ ಜನ ಬೇಸತ್ತಿದ್ದರು. ದೇಶ ಹಲವಾರು ಸಮಸ್ಯೆಗಳನ್ನು ಅವತ್ತು ಎದುರಿಸುತಿತ್ತು. ಜನ ಬದಲಾವಣೆಯನ್ನು ಬಯಸಿದ್ದರು ಎಂದರು.

ನಾನು ಬಂದ್ರೆ ಏನು ಮಾಡುತ್ತೇನೆ ಎಂಬುದನ್ನು ನರೇಂದ್ರ ‌ಮೋದಿ‌ ಸ್ಪಷ್ಟವಾಗಿ ಹೇಳಿದ್ದರು. ನರೇಂದ್ರ ಮೋದಿ ನುಡಿದಂತೆ ನಡೆದುಕೊಂಡಿದ್ದಾರೆ. ದೇಶದ ಭದ್ರತೆಯ ವಿಚಾರದಲ್ಲಿ ಅನೇಕ ಸುಧಾರಣೆಗಳಾಗಿದೆ. ಭ್ರಷ್ಟಾಚಾರ ರಹಿತವಾದ ಸರ್ಕಾರವನ್ನು‌ ಕೊಡೊದಾಗಿ ಹೇಳಿದ್ದರು. ವಿದೇಶಗಳಲ್ಲಿ ಭಾರತದ ಪ್ರಧಾನಿಯ ವರ್ಚಸ್ಸನ್ನು ಹೆಚ್ಚಿಸಿದ್ರು ಎಂದರು.

ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ದೇಶದ ಸೈನ್ಯ ಸ್ವಾವಲಂಬಿ ಆಗಿದೆ. ಶಸ್ತ್ರಾಸ್ತ್ರಗಳಲ್ಲಿ 90% ನಾವು ಆತ್ಮ ನಿರ್ಭರ ಆಗಿದ್ದೇವೆ. ಪೆಹಲ್ಗಾಮ್ ಘಟನೆಗೆ ತಕ್ಕ ಉತ್ತರ ನೀಡಲಾಗಿದೆ. ಕಾಶ್ಮೀರದ ಪರಿಸ್ಥಿತಿಗಳು ಬದಲಾಗಿದೆ. ಕಾಶ್ಮೀರ ನಮ್ಮದಾಗಿದೆ, ತಾಯಿಯ ಮುಕುಟ ನಮ್ಮದಾಗಿದೆ. ಈ ಹಿಂದೆ ನಮ್ಮ ದೇಶದ ಪ್ರಧಾನಿಗೆ ವಿದೇಶದಲ್ಲಿ ಅವಮಾನ ಆದಾಗ ನಮಗೆ‌ ದುಃಖ ಆಗ್ತಿತ್ತು ಎಂದರು. ಆದ್ರೆ ಈಗ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತಿದೆ. ವಿದೇಶಗಳಲ್ಲಿ ಭಾರತಕ್ಕೆ ಗೌರವ ಸಿಗುತ್ತಿದೆ. ಎಲ್ಲಾ ರಾಜ್ಯಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಯಾವುದೇ ರಾಜ್ಯಕ್ಕೂ ಭೇದ ಭಾವ ಮಾಡ್ತಿಲ್ಲ ಎಂದರು.