ಮಂಗಳೂರು : ಸಚಿವ ರಾಮಲಿಂಗ ರೆಡ್ಡಿ ರಾಜೀನಾಮೆ ವಿಚಾರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿ ಹೇಳಿಕೆ ನೀಡಿದರು.

ದಿನ ಹೋದ ಹಾಗೆ ಯಾರೆಲ್ಲ ರಾಜೀನಾಮೆ ಕೊಡ್ತಾರೆ, ಯಾರೆಲ್ಲ ಕಾಂಗ್ರೆಸ್ ಬಿಡ್ತಾರೆ, ಯಾರೆಲ್ಲ ಡಿಕೆ ಶಿವಕುಮಾರ್ ವಿರುದ್ಧ ಬಂಡೆ ಹೇಳ್ತಾರೆ, ಬಂಡೆಗೆ ಬಂಡೆ ಯಾರು ಸಮನಾಗಿ ನಿಲ್ಲುತ್ತಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗತ್ತೆ ಎಂದರು.

ಕಳೆದ 3 ವರುಷಗಳಿಂದ ರಾಜ್ಯದಲ್ಲಿ ಆಡಳಿತ ಸರಿ ಇಲ್ಲಾ, ಸ್ವತ ಡಿಕೆ ಶಿವಕುಮಾರ ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಪಾಸ್ ಕೊಡುತೇನೆ ಎಂದಿದ್ದಾರೆ. ಬಸ್ ಪಾಸ್ ಕೊಟ್ಟು ನಂತ್ರ ಹೇಳಿಕೆ ಕೊಡುವುದು ಒಳ್ಳೆಯದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕೆ ಮಾಡಿದರು.