ಮಂಗಳೂರು: ಪ್ರಕರಣದ ಕುರಿತು ಯಾವುದೇ ಹಸ್ತಕ್ಷೇಪವಿಲ್ಲದೆ SIT ತನಿಖೆ ಮಾಡುತ್ತಿದೆ. ಎಲ್ಲೆಲ್ಲಿ ಏನೇನು ಮಾಡಬೇಕು ಅದನ್ನು ಅವರು ಮಾಡುತ್ತಿದ್ದಾರೆ. ನಾವು ಹೇಳಿದ್ ನಂತ್ರ ತನಿಖೆ ವೇಗವಾಗಿ ಮಾಡದು , ಒತ್ತಡಕ್ಕೆ ಮಣಿಯೋದು ಆತರ ಏನು ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ ಎಂದರು.
ಈ ಪ್ರಕರಣದ ಹಿಂದೆ ಏನಿದೆ ?ಯಾರಿದ್ದಾರೆ ? ಯಾವ ಷಡ್ಯಂತ್ರವಿದೆ? ಯಾವ ರೀತಿ ಷಡ್ಯಂತ್ರ ನಡೆದಿದೆ ?ಕಾರಣ ಏನು? ಎಲ್ಲವನ್ನು SIT ಅಧಿಕಾರಿಗಳು ಪತ್ತೆ ಮಾಡಲಿದ್ದಾರೆ. ನನಗೆ SIT ತನಿಖೆಯ ಬಗ್ಗೆ ಪೂರ್ಣ ವಿಶ್ವಾಸವಿದೆ. ಈ ಪ್ರಕರಣದಲ್ಲಿ ಇದೊಂದು ಷಡ್ಯಂತ್ರ ಅನ್ನೋದು ಒಂದು ಆ್ಯಂಗಲ್ ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದರು.
ನನಗೆ ಗೊತ್ತಿರುವ, ಬಂದಿರುವ ಮಾಹಿತಿ ಪ್ರಕಾರ ಇದೊಂದು ಷಡ್ಯಂತ್ರ, ಸಾಕ್ಷಿಗಳನ್ನ ಕಲೆ ಹಾಕಲಾಗಿದೆ ಮುಲಾಜಿಲ್ಲದೆ ಎಲ್ಲರ ಮೇಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

