ಮಂಗಳೂರು: ಪುಣೆಯಲ್ಲಿರುವ ಭಾರತೀಯ ಮಿಲಿಟರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಮಾಂಡೆಂಟ್ ಆಗಿ ಭಾರತೀಯ ನೌಕಾಪಡೆಯಲ್ಲಿ ರಿಯರ್ ಆಡ್ಮಿರಲ್ ಆಗಿದ್ದ ಮಂಗಳೂರು ಮೂಲದ ನೆಲ್ಸನ್ ಡಿ’ಸೋಜಾ ನೇಮಕಗೊಂಡಿದ್ದಾರೆ.
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್‌ಗಾರ್ಡ್‌ನ ಅ ಧಿಕಾರಿಗಳಿಗೆ ತರಬೇತಿ ನೀಡುವಲ್ಲಿ ಮಿಲಿಟರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಮುಖ ಪಾತ್ರ ವಹಿಸುತ್ತದೆ.
ನೆಲ್ಸನ್ ಡಿ’ಸೋಜಾ ಅವರು ಶಾಲಾ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮತ್ತು ಬಿಇಯನ್ನು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮುಗಿಸಿದ್ದರು.
1991ರಲ್ಲಿ ಭಾರತೀಯ ನೌಕಾಪಡೆಗೆ ನಿಯೋ ಜನೆಗೊಂಡಿದ್ದು 33 ವರ್ಷಗಳ ಸೇವೆ ನೀಡಿದ್ದಾರೆ. ಇವರು 2018ರಲ್ಲಿ “ನೌ ಸೇನಾ ಪದಕ’ ಪಡೆದಿದ್ದಾರೆ.

