ಮಂಗಳೂರು: ನಾಳೆ ಮಂಗಳೂರಿನಲ್ಲಿ ವಕ್ಫ್ ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನೆ ಹಿನ್ನೆಲೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ಮಂಗಳೂರಿನ ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ. ನಾಳೆ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರ ದಟ್ಟಣೆ ಸಾಧ್ಯತೆ ಇದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ – ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ಅರ್ಕುಳ (ಎರಡು ಕಡೆಯಿಂದ) ಹೆದ್ದಾರಿ ನಿರ್ಬಂಧಿಸಲಿದೆ.
ಪರ್ಯಾಯ ಮಾರ್ಗಗಳನ್ನು ಉಪಯೋಗಿಸಲು ಮಂಗಳೂರು ಕಮಿಷನರ್ ಸೂಚನೆ ನೀಡಿದ್ದಾರೆ. ಬಿ.ಸಿ.ರೋಡ್ ನಿಂದ ಮಂಗಳೂರು ನಗರಕ್ಕೆ ಬರುವ ಹಾಗೂ ಹೋಗುವ ಘನ ವಾಹನಗಳು, ಸರಕು ವಾಹನಗಳು ಹಾಗೂ ಬಸ್ಸುಗಳ ಸಂಚಾರಕ್ಕಾಗಿ ಬದಲಿ ಮಾರ್ಗ ಕಲ್ಪಿಸಲಾಗಿದೆ.
ಮೆಲ್ಕಾರು ಜಂಕ್ಷನ್- ಪುತ್ತೂರು/ಬಂಟ್ವಾಳ/ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ/ ಕಾಸರಗೋಡು ಕಡೆಗೆ ಬರುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಲಿಸಲಾಗಿದೆ. ಮೆಲ್ಕಾರ್ ಜಂಕ್ಷನ್ – ಬೊಳಿಯಾರ್ – ದೇರಳಕಟ್ಟೆ – ತೊಕ್ಕೊಟ್ಟು ಮೂಲಕ ಸಂಚರಿಸುವುದು.
ಪೊಳಲಿ ದ್ವಾರದ ಮೂಲಕ ಕಲ್ಪನೆ ಜಂಕ್ಷನ್ – ನೀರುಮಾರ್ಗ – ಬೈತುರ್ಲಿ – – ಕುಲಶೇಖರ – ನಂತೂರು ಮೂಲಕ ಸಂಚರಿಸುವುದು. ವಳಚ್ಚಿಲ್ ಜಂಕ್ಷನ್-ಬಿ.ಸಿ.ರೋಡ್ / ತುಂಬೆ / ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ಸಂಚರಿಸಲಿದೆ.
ವಳಚ್ಚಿಲ್ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು – ನೀರುಮಾರ್ಗ – ಬೈತುರ್ಲಿ – ನಂತೂರು ಮೂಲಕ ಸಂಚರಿಸುವುದು. ಅಡ್ಯಾರ್ ಕಟ್ಟೆ-ಬಿ.ಸಿ.ರೋಡ್ / ತುಂಬೆ / ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್ – ಕೊಣಾಜೆ – ದೇರಳಕಟ್ಟೆ – ತೊಕ್ಕೊಟ್ಟು ಮೂಲಕ ಸಂಚರಿಸುವುದು/
ಉಡುಪಿ / ಮುಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ – ಮೂಡಬಿದ್ರೆ – ಸಿದ್ದಕಟ್ಟೆ – ಬಂಟ್ವಾಳ ಮೂಲಕ ಸಂಚರಿಸುವುದು. ಪಡುಬಿದ್ರೆ -ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ – ಮೂಡಬಿದ್ರೆ – ಸಿದ್ದಕಟ್ಟೆ – ಬಂಟ್ವಾಳ ಮೂಲಕ ಸಂಚರಿಸುವುದು
ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿಸಿ ವಕ್ಫ್ ತಿದ್ದುಪಡಿ ವಿರುದ್ದ ಬೃಹತ್ ಹೋರಾಟ ನಡೆಯಲಿದೆ. ಧಾರ್ಮಿಕ ಮುಖಂಡರು, ವಿದ್ವಾಂಸರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಎ.18ರ ಶುಕ್ರವಾರ ಮಂಗಳೂರಿನ ಅಡ್ಯಾರ್ ಕಣ್ಣೂರು ಶಾ ಮೈದಾನದಲ್ಲಿ ಹೋರಾಟ ನಡೆಯಲಿದ್ದು, ದ.ಕ, ಉಡುಪಿ, ಚಿಕ್ಕಮಗಳೂರು, ಹಾಸನ ಭಾಗದ ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದೆ.
ಕರ್ನಾಟಕ ಉಲಮಾ ಸಮನ್ವಯ ಸಮಿತಿ ವತಿಯಿಂದ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ. ಕರ್ನಾಟಕದ ಪ್ರಮುಖ ಧಾರ್ಮಿಕ ನಾಯಕರಾದ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮತ್ತು ಖಾಝಿ ಶೈಖುನಾ ಮಾಣಿ ಉಸ್ತಾದ್ ನೇತೃತ್ವ ನಡೆಯಲಿದ್ದು, ನಾಲ್ಕು ಜಿಲ್ಲೆಗಳ ಎಲ್ಲಾ ಮೊಹಲ್ಲಾಗಳಿಗೆ ಧಾರ್ಮಿಕ ನಾಯಕರು ಸುತ್ತೋಲೆ ಹೊರಡಿಸಿದ್ದಾರೆ.

