ಮಂಗಳೂರು: ದ.ಕ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಅಬ್ಬರದಿಂದ ಬಜಪೆ ಸಮೀಪದ ಅದ್ಯಪಾಡಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಬಜಪೆ-ಅದ್ಯಪಾಡಿಯ ಸಂಪರ್ಕ ಕಡಿತವಾಗಿದ್ದು, ಮಂಗಳೂರು ವಿಮಾನನಿಲ್ದಾಣ ಕೆಳಭಾಗದ ಅದ್ಯಪಾಡಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಸಂಪರ್ಕ ರಸ್ತೆ ಹಾನಿಗೊಂಡಿದೆ.

ರಸ್ತೆ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿದೆ. ವಿದ್ಯುತ್ ಕಂಬ ಗಳು ಉರುಳಿಬಿದ್ದಿದೆ. ತಗ್ಗು ಪ್ರದೇಶದ ಮನೆಯ ಅಂಗಳದಲ್ಲಿ ಮಣ್ಣು ಕೆಸರು ತುಂಬಿಕೊಂಡಿದೆ. ಭೀಕರವಾಗಿ ಗುಡ್ಡ ಮಣ್ಣು ಮಿಶ್ರಿತ ನೀರು ಹರಿದು ಬಂದಿದೆ.

